"7 ದಿನದಲ್ಲಿ ಹೊಟ್ಟೆ ಕೊಬ್ಬು ಕಡಿಮೆ?"👉 "ಈ Morning Drink ಟ್ರೈ ಮಾಡಿದ್ದೀರಾ?"
ಬೂದುಗುಂಬಳಕಾಯಿ ಜ್ಯೂಸ್ ಲಾಭಗಳು/Weight Loss ಗೆ ಸೂಪರ್ ಡ್ರಿಂಕ್
ಪರಿಚಯ
ಬೂದುಗುಂಬಳಕಾಯಿ ಜ್ಯೂಸ್ (Ash Gourd Juice) ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕರವಾದ ನೈಸರ್ಗಿಕ ಪಾನೀಯವಾಗಿದೆ. ಇದು ದೇಹವನ್ನು ತಂಪಾಗಿಡಲು, ತೂಕ ಇಳಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೆಚ್ಚು ಫಲಿತಾಂಶ ಸಿಗುತ್ತದೆ.
ಬೂದುಗುಂಬಳಕಾಯಿ ಜ್ಯೂಸ್ ಲಾಭಗಳು:
1. ದೇಹ ತಂಪಾಗಿರಲು ಸಹಾಯ.
ಬೇಸಿಗೆ ಸಮಯದಲ್ಲಿ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ.
2. ತೂಕ ಇಳಿಸಲು ಸಹಾಯ ಮಾಡುತ್ತದೆ.
ಈ ಜ್ಯೂಸ್ ಕಡಿಮೆ ಕ್ಯಾಲೊರಿಗಳಿಂದ ಕೂಡಿದ್ದು, ಫ್ಯಾಟ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ
3.ಜೀರ್ಣಕ್ರಿಯೆ ಸುಧಾರಣೆ.
ಇದು ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
4.ಚರ್ಮಕ್ಕೆ ಒಳ್ಳೆಯದು.
ಚರ್ಮವನ್ನು ಕ್ಲೀನ್ ಮತ್ತು ಗ್ಲೋಯಿಂಗ್ ಆಗಿ ಮಾಡುತ್ತದೆ.
5.ದೇಹ ಡಿಟಾಕ್ಸ್ ಮಾಡುತ್ತದೆ.
ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಹೇಗೆ ತಯಾರಿಸಬೇಕು?
✒ಬೂದುಗುಂಬಳಕಾಯಿ ತುಂಡುಗಳನ್ನು ತೆಗೆದುಕೊಳ್ಳಿ
✒ಮಿಕ್ಸರ್ ನಲ್ಲಿ ಚೆನ್ನಾಗಿ ರುಬ್ಬಿ
✒ನೀರು ಸ್ವಲ್ಪ ಸೇರಿಸಿ
✒ಫಿಲ್ಟರ್ ಮಾಡಿ ಕುಡಿಯಿರಿ
✒ಸಕ್ಕರೆ ಹಾಕಬೇಡಿ
ಯಾವಾಗ ಕುಡಿಯಬೇಕು?
👉 ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅತ್ಯುತ್ತಮ.
ಜಾಗ್ರತೆ:
•Low BP ಇರುವವರು ವೈದ್ಯರ ಸಲಹೆ ಪಡೆದುಕೊಳ್ಳಿ
•ತುಂಬಾ ಚಳಿ ದೇಹ ಇರುವವರು ಕಡಿಮೆ ಪ್ರಮಾಣದಲ್ಲಿ ಕುಡಿಯಬೇಕು.
ಬೂದುಗುಂಬಳಕಾಯಿ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯ ನೈಸರ್ಗಿಕ ಡ್ರಿಂಕ್ ಆಗಿದ್ದು, ದಿನನಿತ್ಯದ ಜೀವನದಲ್ಲಿ ಸೇರಿಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.
"ನಿಮ್ಮ ಆರೋಗ್ಯಕ್ಕಾಗಿ ಇಂದು ಈ ಜ್ಯೂಸ್ ಟ್ರೈ ಮಾಡಿ!"
⚠️ Important Note
ಇದು 7 ದಿನದಲ್ಲಿ magic result ಅಲ್ಲ ,ಆದರೆ ಸರಿಯಾದ diet + exercise ಜೊತೆಗೆ ಮಾಡಿದ್ರೆ ಉತ್ತಮ ಫಲಿತಾಂಶ ಸಿಗುತ್ತದೆ .
ಸಾಮಾನ್ಯ ಪ್ರಶ್ನೆಗಳು❓ FAQ
1.ತೂಕ ಇಳಿಸಲು ಇದು ಸಹಾಯ ಮಾಡುತ್ತದಾ?
ಹೌದು, ಬೂದುಗುಂಬಳಕಾಯಿ ಜ್ಯೂಸ್ ಕಡಿಮೆ ಕ್ಯಾಲೊರಿಯಿದ್ದು, ಫ್ಯಾಟ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ಜ್ಯೂಸ್ ಯಾವಾಗ ಕುಡಿಯಬೇಕು?
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯೋದು ಬೆಸ್ಟ್.
3. ಸಕ್ಕರೆ ಅಥವಾ ಉಪ್ಪು ಹಾಕಬಹುದಾ?
ಸಕ್ಕರೆ ಹಾಕಬೇಡಿ. ಬೇಕಾದರೆ ಸ್ವಲ್ಪ ಲಿಂಬೆ ಅಥವಾ ಪುದೀನಾ ಸೇರಿಸಬಹುದು.
4. ಯಾವಷ್ಟು ಪ್ರಮಾಣದಲ್ಲಿ ಕುಡಿಯಬೇಕು?
ಪ್ರತಿದಿನ 1 ಗ್ಲಾಸ್ (200–250 ml) ಸಾಕು.
5.ಈ ಜ್ಯೂಸ್ ಸೈಡ್ ಎಫೆಕ್ಟ್ ಇದೆಯಾ?
ಸಾಮಾನ್ಯವಾಗಿ ಇಲ್ಲ. ಆದರೆ ಹೆಚ್ಚು ಕುಡಿದ್ರೆ ಹೊಟ್ಟೆ ತಂಪಾಗಿ ಅಸಹಜವಾಗಬಹುದು.
👉 ಇನ್ನಷ್ಟು ಆರೋಗ್ಯ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಫಾಲೋ ಮಾಡಿ!
ನಾನು ಈಗಾಗಲೇ ಆರೋಗ್ಯಕರ ಪಾನಿಯಗಳು ಎಂಬ ಲೇಖನವನ್ನು ಬರೆದಿದ್ದೇನೆ ಈಗಲೇ ಓದಿ.👇
Comments
Post a Comment