ಬೆಳಗ್ಗೆಯಿಂದ ರಾತ್ರಿಯ ತನಕ ಬಾಣಂತಿಯರಿಗೆ ಆರೋಗ್ಯಕರ ಡಯಟ್ ಪ್ಲಾನ್!! ಈಗಲೇ ಓದಿ
ದಿನಪೂರ್ತಿ ಸಮತೋಲನ ಆಹಾರ – ತಾಯಿಗೂ ಮಗುವಿಗೂ ಉತ್ತಮ ಆರೋಗ್ಯ.
ಪ್ರಸವದ ನಂತರ ಎದೆಹಾಲು ನೀಡುತ್ತಿರುವ ತಾಯಿಗಳಿಗೆ ಬೆಳಿಗ್ಗೆಯಿಂದ ರಾತ್ರಿಯ ತನಕ ಅನುಸರಿಸಬಹುದಾದ ಸುರಕ್ಷಿತ ಮತ್ತು ಪೌಷ್ಟಿಕ ಆಹಾರ ಮಾರ್ಗದರ್ಶಿ.
ಅನುಭವದ ಮಾತು ಹೇಳುವುದಾದರೆ ತಾಯಿ ಚೆನ್ನಾಗಿ ಊಟ ಮಾಡುವುದರಿಂದ ಅಂದರೆ ಪೌಷ್ಟಿಕ ಆಹಾರ ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಹೆಚ್ಚುವರಿ ತೂಕವನ್ನು ಬಲು ಸುಲಭವಾಗಿ ಇಳಿಸಬಹುದು.
ಬೆಳಗ್ಗೆಯಿಂದ ರಾತ್ರಿಯ ತನಕ ಬಾಣಂತಿಯರ ಡಯಟ್ ಹೇಗಿರಬೇಕು?
ಪ್ರಸವದ ನಂತರ ಮಹಿಳೆಯ ದೇಹ ಪುನಶ್ಚೇತನಗೊಳ್ಳಲು ಸಮಯ ಬೇಕಾಗುತ್ತದೆ. ಈ ಅವಧಿಯಲ್ಲಿ ತಾಯಿಹಾಲು ನೀಡುತ್ತಿರುವ ತಾಯಿಯರು ಪೌಷ್ಟಿಕ ಆಹಾರ ಸೇವಿಸುವುದು ಅತ್ಯಂತ ಮುಖ್ಯ. ಕಠಿಣ ಡಯಟ್ ಅಥವಾ ಉಪವಾಸ ಮಾಡುವುದು ಸರಿಯಲ್ಲ. ಬದಲಾಗಿ, ದಿನಪೂರ್ತಿ ಸಮತೋಲನ ಆಹಾರ ಮತ್ತು ಸರಿಯಾದ ಸಮಯದಲ್ಲಿ ಸಣ್ಣ ಪ್ರಮಾಣದ ಊಟವನ್ನು ಅನುಸರಿಸುವುದು ಉತ್ತಮ ವಿಧಾನ.
ಸಮತೋಲನ ಆಹಾರ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹಾಲು ಉತ್ಪಾದನೆಯನ್ನು ಕಾಪಾಡುತ್ತದೆ ಮತ್ತು ನಿಧಾನವಾಗಿ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದನ್ನು ನಾನು ನಿಮಗೆ ಇಲ್ಲಿ ತಿಳಿಸಿಕೊಡುತ್ತೇನೆ. ಇದನ್ನು ಸಾಕಷ್ಟು ಮಹಿಳೆಯರು ಪ್ರಯತ್ನಿಸಿ ಫಲಿತಾಂಶವನ್ನು ಹೊಂದಿದ್ದಾರೆ.
ಊಟದ ಸಮಯವನ್ನು ನಿಗದಿಪಡಿಸಿಕೊಳ್ಳುವುದು ಇಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಂತರ ಈ ಕೆಳಗಿನವುಗಳನ್ನು ಅನುಸರಿಸಿ.
1)ಬೆಳಿಗ್ಗೆ ಉಪಹಾರ ತಪ್ಪಿಸಬಾರದು.
ಉದಾಹರಣೆ:ಇಡ್ಲಿ + ಸಾಂಬಾರ್
ರಾಗಿ ದೋಸೆ,ಓಟ್ಸ್ + ತರಕಾರಿ+1 ಒಂದು ಮೊಟ್ಟೆ
ಉಪಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್ ಇರಬೇಕು. ಇದು ಹೆಚ್ಚು ಸಮಯ ಹಸಿವು ಬರದಂತೆ ತಡೆಯುತ್ತದೆ.
2)ಮಧ್ಯಾಹ್ನ ಮೊದಲು ಸಣ್ಣಹಣ್ಣು+ಬಾದಾಮಿ
ಇವು ಶಕ್ತಿ ಹೆಚ್ಚಿಸಿ ದೇಹದ ದುರ್ಬಲತೆಯನ್ನು ಕಡಿಮೆ ಮಾಡುತ್ತದೆ.
3)ಸಮತೋಲನ ಮಧ್ಯಾಹ್ನ ಊಟ
ಎರಡು ಚಪಾತಿ ಅಥವಾ 1 ಕಪ್ ಅನ್ನ ಜೊತೆಗೆ
ಹಸಿರು ಸೊಪ್ಪು,ತರಕಾರಿ
ಈ ಸಮಯದಲ್ಲಿ ಹೆಚ್ಚು ಎಣ್ಣೆ ಮತ್ತು ಗಾಢ ಆಹಾರ ತಪ್ಪಿಸಬೇಕು.
4)ಸಂಜೆ ಸಮಯ
ಸಂಜೆ ಸಮಯದಲ್ಲಿ ಜಂಕ್ ಫುಡ್ ತಿನ್ನಬೇಡಿ.
ಸ್ಟೀಮ್ ಜೋಳ+ಸಕ್ಕರೆ ಇಲ್ಲದ ಕಾಫಿ
5)ಹಗುರ ರಾತ್ರಿ ಊಟ
ರಾತ್ರಿ ಊಟ ಹಗುರವಾಗಿರಬೇಕು.
ಎರಡು ಚಪಾತಿ + ತರಕಾರಿ
ಅಥವಾ ವೆಜಿಟೆಬಲ್ ಸೂಪ್
ರಾತ್ರಿ ತುಂಬಾ ತಡವಾಗಿ ಊಟ ಮಾಡಬಾರದು.
ಯಾವ ರೀತಿ ಅನುಸರಿಸಬೇಕು?
ದಿನಕ್ಕೆ 5 ಸಣ್ಣ ಊಟಗಳು,5–3 ಲೀಟರ್ ನೀರು
ಕನಿಷ್ಠ 20–30 ನಿಮಿಷ ನಡೆ,ಸಾಕಷ್ಟು ನಿದ್ರೆ (7 ಗಂಟೆ),
"ಜಂಕ್ ಫುಡ್ ಮತ್ತು ಹೆಚ್ಚು ಸಕ್ಕರೆ ತಪ್ಪಿಸಿ."
ನನ್ನ ಅನುಭವಿ ಮಾತು
ಬಾಣಂತಿಯರ ತೂಕ ಇಳಿಕೆ ನಿಧಾನವಾಗಿ ಮತ್ತು ಸುರಕ್ಷಿತವಾಗಿ ಆಗಬೇಕು. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಕಾಪಾಡಿಕೊಂಡು ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ಉತ್ತಮ ಫಲಿತಾಂಶ ಕಾಣಬಹುದು.ನಿಧಾನವಾದರೂ ಸುರಕ್ಷಿತ ತೂಕ ಇಳಿಕೆ – ಬಾಣಂತಿಯರ ಆರೋಗ್ಯದ ಮೊದಲ ಹೆಜ್ಜೆ.👇👇👇👹
Comments
Post a Comment