ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery

ಬಾಣಂತಿಯರಿಗಾಗಿ ಯೋಗದ ಮಹತ್ವ

ಪ್ರಸವದ ನಂತರ ತಾಯಿಯ ದೇಹ ಪುನಶ್ಚೇತನಕ್ಕೆ ಯೋಗ ಅತ್ಯಂತ ಮುಖ್ಯ. ಇದು core muscles ಸುಧಾರಣೆ, ಹೃದಯ ಶಕ್ತಿ, ಮತ್ತು ಮನಃಶಾಂತಿ ಕೊಡುತ್ತದೆ. ನವತಾಯಂದಿರಿಗೆ safe poses ಮಾತ್ರ ಬಳಸಬೇಕು, deep stretches ಮತ್ತು high intensity avoid ಮಾಡಬೇಕು.
ಪ್ರಸವದ ನಂತರ, ತಾಯಿಯ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ: muscle weakness, pelvic instability, back pain, emotional stress. ಈ ಸಮಯದಲ್ಲಿ ಯೋಗ ನಿತ್ಯ ಅಭ್ಯಾಸ ಆರೋಗ್ಯವಂತರಾಗಲು, ದೇಹವನ್ನು ಸುರಕ್ಷಿತವಾಗಿ ಸೀಮಿತದಲ್ಲಿಟ್ಟುಕೊಳ್ಳಲು ಅತ್ಯುತ್ತಮ. ಈಗ ನಾವು ಕೆಲವು ಬಗೆಯ ಯೋಗ ಪೋಸ್ ಗಳನ್ನು ತಿಳಿಯೋಣ ಬನ್ನಿ.

೧)ಉಸಿರಾಟದ ಅಭ್ಯಾಸ.

ಮೇಲೆ ಕಾಣಿಸುವ ಚಿತ್ರದಂತೆ ಮೊದಲು ಯಾವುದೇ ಯೋಗ ಅಭ್ಯಾಸ ಮಾಡುವುದಕ್ಕಿಂತ ಮುಂಚೆ, ಉಸಿರಾಟದ ಅಭ್ಯಾಸ ಮಾಡುವುದು ಬಹು ಮುಖ್ಯ
ಮಾಡುವ ವಿಧಾನ:
ನೆಲದಲ್ಲಿ ಕಾಲು ಮಡಚಿ ನೇರವಾಗಿ ಕುಳಿತುಕೊಳ್ಳಿ.
ನಿಧಾನವಾಗಿ ಉಸಿರನ್ನು ಎಳೆಯಿರಿ.
ನಿಧಾನವಾಗಿ ಉಸಿರನ್ನು ಬಿಡಿರಿ.
5–10 ನಿಮಿಷ ಅಭ್ಯಾಸ ಮಾಡಿ.
☑👇ಲಾಭಗಳು:
ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ
ದೇಹಕ್ಕೆ ಶಕ್ತಿ ಸಿಗುತ್ತದೆ
ಮನಸ್ಸು ಮತ್ತು ದೇಹ ಸಮತೋಲನದಲ್ಲಿರುತ್ತದೆ.

೨)ಮರ್ಜರಾಸನ (ಬೆಕ್ಕು–ಹಸು ಚಲನ):


ಮಾಡುವ ವಿಧಾನ:
ಕೈ ಮತ್ತು ಮೊಣಕಾಲುಗಳ ಮೇಲೆ ನೆಲದಲ್ಲಿ ತೂಗು.
ಉಸಿರನ್ನು ಎಳೆಯುವಾಗ ಬೆನ್ನು ಕೆಳಗೆ ಇಳಿಸಿ ತಲೆ ಮೇಲಕ್ಕೆತ್ತಿ.
ಉಸಿರನ್ನು ಬಿಡುವಾಗ ಬೆನ್ನು ಮೇಲಕ್ಕೆ ಎತ್ತಿ ತಲೆ ಒಳಗೆ ತಗ್ಗಿಸಿ.
8–10 ಬಾರಿ ನಿಧಾನವಾಗಿ ಪುನರಾವರ್ತಿಸಿ.
☑ಲಾಭಗಳು:
ಬೆನ್ನು ನೋವು ಕಡಿಮೆಯಾಗುತ್ತದೆ
ಹೊಟ್ಟೆ ಭಾಗದ ಸ್ನಾಯುಗಳು ಬಲವಾಗುತ್ತವೆ
ಬೆನ್ನು ಲವಚಿಕತೆ ಹೆಚ್ಚುತ್ತದೆ.

೩) ಬಾಲಾಸನ:

ಮಾಡುವ ವಿಧಾನ:
ಮೊಣಕಾಲುಗಳ ಮೇಲೆ ಕುಳಿತು ದೇಹವನ್ನು ಮುಂದೆ ಬಾಗಿಸಿ.
ನೆತ್ತಿಯನ್ನು ನೆಲಕ್ಕೆ ತಾಕಿಸಿ ಕೈಗಳನ್ನು ಮುಂದೆ ಚಾಚಿ.
20–30 ಸೆಕೆಂಡ್ ಶಾಂತವಾಗಿ ಇರಿ.
☑ಲಾಭಗಳು:
ಮನಸ್ಸು ಶಾಂತವಾಗುತ್ತದೆ
ಬೆನ್ನು ಮತ್ತು ಭುಜದ ಒತ್ತಡ ಕಡಿಮೆಯಾಗುತ್ತದೆ
ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.

೪)ಸೇತುಬಂಧಾಸನ:

ಮಾಡುವ ವಿಧಾನ:
ಬೆನ್ನಿನ ಮೇಲೆ ನೆಲದಲ್ಲಿ ಮಲಗಿ.
ಮೊಣಕಾಲುಗಳನ್ನು ಮಡಚಿ ಕಾಲುಗಳನ್ನು ನೆಲಕ್ಕೆ ಇಡಿ.
ನಿಧಾನವಾಗಿ ಹಿಪ್ ಭಾಗವನ್ನು ಮೇಲಕ್ಕೆ ಎತ್ತಿ.
10–15 ಸೆಕೆಂಡ್ ಹಿಡಿದು ನಿಧಾನವಾಗಿ ಕೆಳಗಿಳಿ.
☑ಲಾಭಗಳು:
ಹೊಟ್ಟೆ ಮತ್ತು ಹಿಪ್ ಭಾಗ ಬಲವಾಗುತ್ತದೆ
ರಕ್ತಸಂಚಾರ ಸುಧಾರಿಸುತ್ತದೆ
ದೇಹದ ಸಮತೋಲನ ಹೆಚ್ಚುತ್ತದೆ.

೫)ಗೋಡೆಯ ಮೇಲೆ ಕಾಲುಗಳನ್ನು ಇಡುವ ಆಸನ:

ಮಾಡುವ ವಿಧಾನ:
ಬೆನ್ನಿನ ಮೇಲೆ ನೆಲದಲ್ಲಿ ಮಲಗಿ.
ಕಾಲುಗಳನ್ನು ಗೋಡೆಯ ಮೇಲೆ ನೇರವಾಗಿ ಇಡಿ.
ಕೈಗಳನ್ನು ಬದಿಯಲ್ಲಿ ಇಟ್ಟು 2–3 ನಿಮಿಷ ಶಾಂತವಾಗಿ ಇರಿ.
☑ಲಾಭಗಳು:
ಕಾಲಿನ ಊತ ಕಡಿಮೆಯಾಗುತ್ತದೆ
ರಕ್ತಸಂಚಾರ ಸುಧಾರಿಸುತ್ತದೆ
ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.

ಯಾವಾಗ ಬಾಣಂತಿಯರು ಯೋಗಾಸನ ಮಾಡಬಾರದು?

 ಪ್ರಸವದ ತಕ್ಷಣ
ಸಾಮಾನ್ಯ ಪ್ರಸವವಾದರೂ ಕನಿಷ್ಠ 4–6 ವಾರಗಳು ವಿಶ್ರಾಂತಿ ಅಗತ್ಯ. ಶಸ್ತ್ರಚಿಕಿತ್ಸೆ (ಸೀಸೇರಿಯನ್) ಆಗಿದ್ದರೆ ವೈದ್ಯರ ಅನುಮತಿ ಇಲ್ಲದೆ ಯೋಗ ಮಾಡಬಾರದು.
ಹೆಚ್ಚು ರಕ್ತಸ್ರಾವ ಇದ್ದರೆ
ಪ್ರಸವ ನಂತರ ಹೆಚ್ಚು ರಕ್ತಸ್ರಾವ, ತಲೆ ಸುತ್ತುವುದು, ದೌರ್ಬಲ್ಯ ಇದ್ದರೆ ಯೋಗ ತಾತ್ಕಾಲಿಕವಾಗಿ ನಿಲ್ಲಿಸಬೇಕು.
ಹೊಟ್ಟೆ ಅಥವಾ ಹೊಲಿಗೆ ನೋವು ಇದ್ದರೆ
ಶಸ್ತ್ರಚಿಕಿತ್ಸೆಯ ಹೊಲಿಗೆ ಭಾಗದಲ್ಲಿ ನೋವು, ಊತ ಅಥವಾ ಎಳೆತ ಇದ್ದರೆ ಯಾವುದೇ ಆಸನ ಮಾಡಬಾರದು.
ತೀವ್ರ ಬೆನ್ನು ಅಥವಾ ಹಿಪ್ ನೋವು ಇದ್ದರೆ
ನೋವು ಹೆಚ್ಚಾಗಿದ್ದರೆ ಯೋಗದಿಂದ ಸ್ಥಿತಿ ಹದಗೆಡಬಹುದು. ಮೊದಲು ವೈದ್ಯರನ್ನು ಸಂಪರ್ಕಿಸಿ.
ಜ್ವರ ಅಥವಾ ದೇಹದ ಸೋಂಕು ಇದ್ದರೆ
ಜ್ವರ, ಮೂತ್ರದ ಸೋಂಕು, ದೇಹದಲ್ಲಿ ಉರಿಯೂತ ಇದ್ದಾಗ ವಿಶ್ರಾಂತಿ ಮುಖ್ಯ.
ರಕ್ತದ ಒತ್ತಡ ಸಮಸ್ಯೆ ಇದ್ದರೆ
ಹೆಚ್ಚು ಅಥವಾ ಕಡಿಮೆ ರಕ್ತದ ಒತ್ತಡ ಇರುವವರು ವೈದ್ಯರ ಸಲಹೆ ಇಲ್ಲದೆ ಯೋಗ ಪ್ರಾರಂಭಿಸಬಾರದು.
ತೀವ್ರ ದೌರ್ಬಲ್ಯ ಮತ್ತು ನಿದ್ರಾಹೀನತೆ ಇದ್ದರೆ
ದೇಹ ತುಂಬಾ ಸುಸ್ತಾಗಿದ್ದರೆ ವಿಶ್ರಾಂತಿ ಮುಖ್ಯ. ಯೋಗವನ್ನು ನಂತರ ಆರಂಭಿಸಬಹುದು.

ಮುಖ್ಯ ಮಾಹಿತಿ:

ಈ ಲೇಖನದಲ್ಲಿರುವ ಮಾಹಿತಿ ಸಾಮಾನ್ಯ ಆರೋಗ್ಯ ಜ್ಞಾನಕ್ಕಾಗಿ ಮಾತ್ರ. ಯಾವುದೇ ಯೋಗಾಸನ ಅಥವಾ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಅತ್ಯಾವಶ್ಯಕ. ಪ್ರತಿಯೊಬ್ಬ ತಾಯಿಯ ದೇಹದ ಸ್ಥಿತಿ ವಿಭಿನ್ನವಾಗಿರುತ್ತದೆ. ಆರೋಗ್ಯ ಸಮಸ್ಯೆ, ನೋವು ಅಥವಾ ಅಸಹನೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ನಿಮ್ಮ ಸ್ನೇಹಿತೆಯರೊಂದಿಗೆ ಹಂಚಿಕೊಳ್ಳಿ. ಇನ್ನಷ್ಟು ಬಾಣಂತಿ ಆರೈಕೆ ಸಲಹೆಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ಭೇಟಿ ಮಾಡುತ್ತಿರಿ.


Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.