Parents ಗಮನಿಸಿ! ಈ 6 ಆಹಾರ ಅಪಾಯಕಾರಿ 🚫
“ಈ ಆಹಾರಗಳು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿ”
ಈ ಲೇಖನದಲ್ಲಿ ಮಕ್ಕಳಿಗೆ ತಿನ್ನಬಾರದ ಆಹಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಮಕ್ಕಳಿಗೆ ತಿನ್ನಬಾರದ 10 ಆಹಾರಗಳು
1.ಪ್ಯಾಕೆಟ್ ಚಿಪ್ಸ್ & ಜಂಕ್ ಫುಡ್
ಮಕ್ಕಳು ಹೆಚ್ಚು ಜಂಕ್ ಫುಡ್ ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ. ಇದರಿಂದ ತೂಕ ಹೆಚ್ಚಳ, ದೌರ್ಬಲ್ಯ ಮತ್ತು ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಪ್ಯಾಕೆಟ್ ಫುಡ್ಸ್ ಮಕ್ಕಳ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ನೀಡುವುದಿಲ್ಲ. ಆದ್ದರಿಂದ ಮನೆಯಲ್ಲೇ ಮಾಡಿದ fresh ಆಹಾರ ನೀಡುವುದು ಉತ್ತಮ.
2.ಸಾಫ್ಟ್ ಡ್ರಿಂಕ್ಸ್ & ಸೋಡಾ
ಸಕ್ಕರೆ ಅಂಶ ಹೆಚ್ಚು ಇರುವ ಕೋಲ್ಡ್ ಡ್ರಿಂಕ್ಸ್ ಮಕ್ಕಳ ಹಲ್ಲು ಮತ್ತು ಆರೋಗ್ಯಕ್ಕೆ ಹಾನಿಕಾರಕ. ಇದು ಮಕ್ಕಳಲ್ಲಿ obesity ಸಮಸ್ಯೆ ಹೆಚ್ಚಿಸಬಹುದು. ಹೆಚ್ಚು ಸೇವಿಸಿದರೆ ಹಸಿವು ಕಡಿಮೆಯಾಗುತ್ತದೆ. ನೀರು ಮತ್ತು fresh juice ಕೊಡುವುದು ಉತ್ತಮ ಆಯ್ಕೆ.
3.ಚಾಕೊಲೇಟ್ & ಸಿಹಿ ಪದಾರ್ಥಗಳು
ಚಾಕೊಲೇಟ್ ಮತ್ತು ಹೆಚ್ಚು ಸಿಹಿ ಪದಾರ್ಥಗಳಲ್ಲಿ sugar ಪ್ರಮಾಣ ತುಂಬಾ ಹೆಚ್ಚು ಇರುತ್ತದೆ. ಮಕ್ಕಳು ಇದನ್ನು ಹೆಚ್ಚು ತಿಂದರೆ ಹಲ್ಲು ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ cavities ಮತ್ತು tooth decay ಸಮಸ್ಯೆಗಳು ಕಾಣಿಸಬಹುದು. ಕೆಲವು ಮಕ್ಕಳಲ್ಲಿ ಹೊಟ್ಟೆ ನೋವು ಹಾಗೂ ಹಸಿವು ಕಡಿಮೆಯಾಗುವ ಸಮಸ್ಯೆಯೂ ಬರುತ್ತದೆ.
ವೈಜ್ಞಾನಿಕವಾಗಿ ನೋಡಿದರೆ excess sugar ಮಕ್ಕಳ insulin ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ future ನಲ್ಲಿ obesity ಮತ್ತು diabetes ಅಪಾಯ ಹೆಚ್ಚಾಗಬಹುದು.
4.ಪ್ಯಾಕೆಟ್ ಜ್ಯೂಸ್
ಪ್ಯಾಕೆಟ್ ಜ್ಯೂಸ್‌ನಲ್ಲಿ ಅಡಗಿರುವ ಸಕ್ಕರೆ ಪ್ರಮಾಣ ಹೆಚ್ಚು ಇರುವುದರಿಂದ ಮಕ್ಕಳ ತೂಕ ಬೇಗ ಹೆಚ್ಚಾಗಬಹುದು. ಇದರಿಂದ ಸ್ಥೂಲಕಾಯ (obesity) ಹಾಗೂ ಮುಂದಿನ ದಿನಗಳಲ್ಲಿ ಮಧುಮೇಹದ ಅಪಾಯವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕೆಲವು ಮಕ್ಕಳಲ್ಲಿ ತಕ್ಷಣ ಶಕ್ತಿ ಹೆಚ್ಚಾದಂತೆ ಕಾಣಿಸಿ, ನಂತರ ಬೇಗ ದಣಿವು ಕಾಣಿಸಬಹುದು.
ಅಧ್ಯಯನಗಳ ಪ್ರಕಾರ ಹೆಚ್ಚು ಸಕ್ಕರೆ ಇರುವ ಪಾನೀಯಗಳು ಮಕ್ಕಳ ದೇಹದ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ವೈದ್ಯರು ಕೂಡ ಪ್ರತಿದಿನ ಪ್ಯಾಕೆಟ್ ಜ್ಯೂಸ್ ನೀಡುವುದನ್ನು ತಪ್ಪಿಸಲು ಸಲಹೆ ಕೊಡುತ್ತಾರೆ.
5.ಫಾಸ್ಟ್ ಫುಡ್ (ಪಿಜ್ಜಾ, ಬರ್ಗರ್)
ಫಾಸ್ಟ್ ಫುಡ್‌ಗಳಾದ ಪಿಜ್ಜಾ, ಬರ್ಗರ್ ಮುಂತಾದ ಆಹಾರಗಳಲ್ಲಿ ಕೊಬ್ಬು, ಉಪ್ಪು ಮತ್ತು ಸಕ್ಕರೆ ಪ್ರಮಾಣ ಹೆಚ್ಚು ಇರುತ್ತದೆ. ಮಕ್ಕಳು ಇವುಗಳನ್ನು ಹೆಚ್ಚು ತಿನ್ನುವುದರಿಂದ ತೂಕ ಹೆಚ್ಚಳ, ಜೀರ್ಣಕ್ರಿಯೆ ತೊಂದರೆ ಮತ್ತು ದೇಹದಲ್ಲಿ ಕೊಬ್ಬು ಜಮಾ ಆಗುವ ಸಾಧ್ಯತೆ ಇರುತ್ತದೆ. ಇದಲ್ಲದೆ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ಕಡಿಮೆ ಸಿಗುತ್ತವೆ.
6.ಕ್ಯಾಫಿನ್ ಇರುವ ಪಾನೀಯಗಳು (ಟಿ, ಕಾಫಿ)
ಕಾಫಿ ಟೀ ಮಕ್ಕಳಿಗೆ ಸೂಕ್ತವಲ್ಲ, ಇವುಗಳನ್ನುಹೆಚ್ಚು ಸೇವಿಸಿದರೆ ಮಕ್ಕಳ ನಿದ್ರೆ ಸಮಸ್ಯೆ, ಅಶಾಂತಿ ಹಾಗೂ ಹೃದಯ ಬಡಿತ ವೇಗವಾಗುವ ಸಾಧ್ಯತೆ ಇರುತ್ತದೆ. ಚಿಕ್ಕ ವಯಸ್ಸಿನ ಮಕ್ಕಳ ನರಮಂಡಲದ ಮೇಲೆ ಕ್ಯಾಫಿನ್ ಹೆಚ್ಚು ಪರಿಣಾಮ ಬೀರುತ್ತದೆ.
ಅಧ್ಯಯನಗಳ ಪ್ರಕಾರ ಹೆಚ್ಚು ಕ್ಯಾಫಿನ್ ಸೇವನೆ ಮಕ್ಕಳ ಏಕಾಗ್ರತೆ ಮತ್ತು ಸಹಜ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ವೈದ್ಯರು ಮಕ್ಕಳಿಗೆ ಟೀ, ಕಾಫಿ ಬದಲು ಹಾಲು, ನೀರು ಹಾಗೂ ನೈಸರ್ಗಿಕ ಪಾನೀಯಗಳನ್ನು ನೀಡಲು ಸಲಹೆ ಕೊಡುತ್ತಾರೆ.
ವಯಸ್ಸಿನ ಪ್ರಕಾರ ಜಾಗ್ರತೆ
1–3 ವರ್ಷ ಮಕ್ಕಳಿಗೆ
ಯಾವುದೇ ರೀತಿಯ ಜಂಕ್ ಫುಡ್ ಗಳನ್ನು ನೀಡಬಾರದು, ನೈಸರ್ಗಿಕ ಮನೆಯಲ್ಲಿಯೇ ತಯಾರಿಸಿದ ಆಹಾರಗಳನ್ನು ಮಕ್ಕಳಿಗೆ ನೀಡುವುದು ಉತ್ತಮ.
4–10 ವರ್ಷ ಮಕ್ಕಳಿಗೆ
ಪ್ರಯಾಣದ ಸಂದರ್ಭದಲ್ಲಿ(occasional treat ) ನೀಡಬಹುದು ಆದರೆ ಆಹಾರದ ಮೇಲೆ ನಿಯಂತ್ರಣ ಇರುವುದು ತುಂಬಾ ಮುಖ್ಯವಾಗುತ್ತದೆ.
ಪೋಷಕರಿಗೆ ಸಲಹೆಗಳು
☑ಮನೆಯಲ್ಲೇ ಮಾಡಿದ ಆಹಾರ ಹೆಚ್ಚು ಕೊಡಿಸಿ.
☑ಹಣ್ಣು, ತರಕಾರಿ daily include ಮಾಡಿ.
☑ನೀರು ಕುಡಿಯುವ ಅಭ್ಯಾಸ ಮಾಡಿಸಿ.
☑junk food ವಾರಕ್ಕೆ ಒಮ್ಮೆ ಮಾತ್ರ ಕೊಡಿಸಿ.
ಕಿರುಮಾತು
ಮಕ್ಕಳಿಗೆ ಸರಿಯಾದ ಆಹಾರ ನೀಡುವುದು ಅವರ ಭವಿಷ್ಯದ ಆರೋಗ್ಯಕ್ಕೆ ಹೂಡಿಕೆ ಮಾಡಿದಂತೆ. ಆರೋಗ್ಯಕರ ಆಹಾರ ಅಭ್ಯಾಸಗಳನ್ನು ಚಿಕ್ಕವಯಸ್ಸಿನಿಂದಲೇ ಬೆಳೆಸಿದರೆ, ಅವರು ಆರೋಗ್ಯವಾಗಿಯೇ ಬೆಳೆಯುತ್ತಾರೆ.
1.ಮಕ್ಕಳಿಗೆ ಜಂಕ್ ಫುಡ್ ಸಂಪೂರ್ಣ ನಿಲ್ಲಿಸಬೇಕಾ?
ಇಲ್ಲ, ಸಂಪೂರ್ಣ ನಿಲ್ಲಿಸುವ ಅವಶ್ಯಕತೆ ಇಲ್ಲ. ಆದರೆ ವಾರಕ್ಕೆ ಒಂದು ಬಾರಿ ಮಾತ್ರ ಕೊಡುವುದು ಉತ್ತಮ. ಪ್ರತಿದಿನ ಕೊಟ್ಟರೆ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
2.ಯಾವ ವಯಸ್ಸಿನ ಮಕ್ಕಳಿಗೆ ಜಂಕ್ ಫುಡ್ ಹೆಚ್ಚು ಅಪಾಯ?
1 ರಿಂದ 5 ವರ್ಷದ ಮಕ್ಕಳಿಗೆ ಹೆಚ್ಚು ಅಪಾಯಕಾರಿ. ಈ ವಯಸ್ಸಿನಲ್ಲಿ ಅವರ ಜೀರ್ಣಕ್ರಿಯೆ ಮತ್ತು ದೇಹದ ಬೆಳವಣಿಗೆ ತುಂಬಾ ಸಂವೇದನಾಶೀಲವಾಗಿರುತ್ತದೆ.
3.ಮಕ್ಕಳಿಗೆ ಆರೋಗ್ಯಕರ ಪರ್ಯಾಯ ಏನು ಕೊಡಬಹುದು?
ಹಣ್ಣುಗಳು, ತರಕಾರಿ, ಮನೆಯಲ್ಲೇ ಮಾಡಿದ ಉಪಹಾರ (ಇಡ್ಲಿ, ದೋಸೆ, ಉಪ್ಮಾ) ಕೊಡಬಹುದು. ಇದು ಮಕ್ಕಳಿಗೆ ಪೌಷ್ಟಿಕಾಂಶ ನೀಡುತ್ತದೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮಕ್ಕಳ ಬೆಳವಣಿಗೆಗೆ ಸೂಕ್ತವಾದ ಬೆಳಗಿನ ಉಪಹಾರ ಲೇಖನವನ್ನು ಈಗಾಗಲೇ ತಿಳಿಸಿದ್ದೇನೆ ತಪ್ಪದೇ ಓದಿ 👇
Comments
Post a Comment