ಮಕ್ಕಳ ತೂಕ ಕಡಿಮೆ ಇದೆಯಾ? ಈ 10 ಆಹಾರ ಕೊಡ್ರಿ!

Kids Weight Gain: ಮಕ್ಕಳಿಗೆ ತೂಕ ಹೆಚ್ಚಿಸಲು ಏನು ಕೊಡಬೇಕು?

ಮಕ್ಕಳ ತೂಕ ಕಡಿಮೆ ಇರುವುದು ಅನೇಕ ಪೋಷಕರಿಗೆ ಚಿಂತೆಯ ವಿಷಯವಾಗಿದೆ. ಸರಿಯಾದ ಪೌಷ್ಟಿಕ ಆಹಾರ ನೀಡದಿದ್ದರೆ ಬೆಳವಣಿಗೆ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ.

ಮಕ್ಕಳ ತೂಕ ಕಡಿಮೆ ಇರುವುದಕ್ಕೆ ಮುಖ್ಯ ಕಾರಣ ಸರಿಯಾದ ಆಹಾರ ಕೊರತೆ.

ಈ ಲೇಖನದಲ್ಲಿ ಮಕ್ಕಳಿಗೆ ತೂಕ ಹೆಚ್ಚಿಸಲು ಯಾವ ಆಹಾರ ಕೊಡಬೇಕು ಎಂಬುದನ್ನು ಸರಳವಾಗಿ ತಿಳಿಸಿಕೊಡಲಾಗಿದೆ.

ಮಕ್ಕಳ ತೂಕ ಹೆಚ್ಚಿಸಲು 10 ಸೂಪರ್ ಆಹಾರಗಳು

1. ಹಾಲು

ಹಾಲಿನಲ್ಲಿ ಪ್ರೊಟೀನ್ ಮತ್ತು ಕ್ಯಾಲ್ಸಿಯಂನ ಅಂಶ ಹೆಚ್ಚಾಗಿ ಇರುತ್ತದೆ. ಇದನ್ನು ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುಂಚೆ ನೀಡಿದರೆ ಮಕ್ಕಳಿಗೆ ಉತ್ತಮ

2. ಮೊಟ್ಟೆ 

ಮಕ್ಕಳಿಗೆ ದಿನಕ್ಕೆ ಒಂದು ಮೊಟ್ಟೆಯನ್ನು ಬೇಯಿಸಿ ಕೊಡುವುದರಿಂದ ಪ್ರೊಟೀನ್ ನ ಅಂಶ ಸಿಗುತ್ತದೆ ಮಕ್ಕಳು ಎನರ್ಜಿಟಿಕ್ ಆಗಿರಲು ಸಹಾಯಕವಾಗುತ್ತದೆ

3.ಬಾಳೆಹಣ್ಣು 

ಮಕ್ಕಳು ಬಾಳೆಹಣ್ಣನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ. ನೈಸರ್ಗಿಕ ಕ್ಯಾಲೋರಿಗಳು ಇದರಲ್ಲಿವೆ. 

4.ತುಪ್ಪ (Ghee)

ಮಕ್ಕಳಿಗೆ ತುಪ್ಪ ಆರೋಗ್ಯಕರ ಕೊಬ್ಬು,
ಅನ್ನದಲ್ಲಿ ಸ್ವಲ್ಪ ಸೇರಿಸಿ ಕೊಡಬಹುದು.

5. ಅಕ್ಕಿ +  ದಾಲ್

ಇದು ಸಂಪೂರ್ಣಪೌಷ್ಟಿಕ ಆಹಾರ, ಮಕ್ಕಳಿಗೆ
ದಿನನಿತ್ಯಕೊಡಬಹುದು

6. ರಾಗಿ ಮುದ್ದೆ / ರಾಗಿ ಗಂಜಿ

ಮಕ್ಕಳ ಬೆಳವಣಿಗೆಗೆ ಉತ್ತಮ, ಬಹಳಷ್ಟು ಶಕ್ತಿಯನ್ನು ನೀಡುತ್ತದೆ, ಉತ್ತಮವಾಗಿ ಜೀರ್ಣವಾಗಲು ಸಹಾಯಕ

7.ಕಡಲೆಕಾಯಿ / ಪೀನಟ್ ಬಟರ್ 

ಕ್ಯಾಲೊರಿ + ಪ್ರೋಟೀನ್
snack ಆಗಿ ಕೊಡಬಹುದು

8. ಸಿಹಿ ಗೆಣಸು

ಕಾರ್ಬೋಹೈಡ್ರೇಟ್ ಹೆಚ್ಚಾಗಿರುತ್ತದೆ
ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ

9. ಮೊಸರು 

ಮಕ್ಕಳಿಗೆ ಮೊಸರನ್ನು ನೀಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ದಿನನಿತ್ಯ ಮೊಸರನ್ನು ಆಹಾರದಲ್ಲಿ ಬಳಸಬಹುದು

10. ಡ್ರೈಫ್ರೂಟ್ಸ್ 

ಬಾದಾಮಿ, ದ್ರಾಕ್ಷಿ ,ಗೋಡಂಬಿ ,ಪಿಸ್ತಾ, ಇಂತಹ ಡ್ರೈ ಫ್ರೂಟ್ಸ್ ಗಳನ್ನು ಮಕ್ಕಳಿಗೆ ನೀಡುವುದರಿಂದ ಬಹಳಷ್ಟು ಶಕ್ತಿದಾಯಕವಾಗಿರುತ್ತಾರೆ. ದಿನನಿತ್ಯ ಆಟವಾಡಲು ಎನರ್ಜಿಯನ್ನು ನೀಡುತ್ತದೆ. ಇದನ್ನು
ಪುಡಿ ಮಾಡಿ ಹಾಲಿಗೆ ಸೇರಿಸಿ ಸಹ ಕೊಡಬಹುದು.

ವಯಸ್ಸಿನ ಪ್ರಕಾರ ಸಲಹೆ

1–3 ವರ್ಷ ದೊಳಗಿನ ಮಕ್ಕಳಿಗೆ 

ಜೀರ್ಣಿಸುವ ಶಕ್ತಿ ತುಂಬಾ ಕಡಿಮೆ ಇರುತ್ತದೆ ಹಾಗಾಗಿ ಚೆನ್ನಾಗಿ ಬೆಂದ ಆಹಾರವನ್ನು ನೀಡಿ, ಆದಷ್ಟು ಮನೆಯಲ್ಲಿನ ಪೌಷ್ಟಿಕ ಆಹಾರವನ್ನೇ ನೀಡಿ.
ದಿನಕ್ಕೆ 5 ಸಣ್ಣ meals ರೀತಿ ಸಹ ಕೊಡಬಹುದು.

4–10 ವರ್ಷ

balanced diet,ಹಾಲು, ತಾಜಾ ಹಣ್ಣುಗಳನ್ನು ಕೊಡಿ.

ತಪ್ಪು ಮಾಡ್ಬೇಡಿ

❌ Junk food ಕೊಡ್ಬೇಡಿ
❌ ಹೆಚ್ಚು ಸಕ್ಕರೆ avoid ಮಾಡಿ
❌ force feeding ಮಾಡ್ಬೇಡಿ

ಪೋಷಕರಿಗೆ ಸಲಹೆಗಳು

✔ ಸಮಯಕ್ಕೆ ಸರಿಯಾಗಿ ಆಹಾರ ನೀಡಿ
✔ ವಿಭಿನ್ನ ರೀತಿಯ ಆರೋಗ್ಯಕರ ಆಹಾರವನ್ನು ಕೊಡಿ
✔ ಮಕ್ಕಳಿಗೆ ಆಟ ಮತ್ತು activity encourage ಮಾಡಿ
✔ ನೀರು ಸಾಕಷ್ಟು ಕುಡಿಯಲು ಹೇಳಿ

ಸಲಹೆ

ಮಕ್ಕಳ ತೂಕ ಹೆಚ್ಚಿಸಲು ದುಬಾರಿ ಆಹಾರ ಅಗತ್ಯವಿಲ್ಲ. ಮನೆಯಲ್ಲೇ ಸಿಗುವ ಸರಳ ಆಹಾರಗಳಿಂದಲೇ ಉತ್ತಮ ಫಲಿತಾಂಶ ಪಡೆಯಬಹುದು. ಸರಿಯಾದ ಆಹಾರ + ಗಮನ ಕೊಟ್ಟರೆ ಮಕ್ಕಳು ಆರೋಗ್ಯಕರವಾಗಿ ಬೆಳೆಯುತ್ತಾರೆ.

ಸಾಮಾನ್ಯ ಪ್ರಶ್ನೆಗಳು❓ FAQ

1. ಮಕ್ಕಳಿಗೆ ತೂಕ ಹೆಚ್ಚಿಸಲು ಎಷ್ಟು ದಿನ ಬೇಕು?

👉 ಸಾಮಾನ್ಯವಾಗಿ 1–2 ತಿಂಗಳಲ್ಲಿ ಬದಲಾವಣೆ ಕಾಣಬಹುದು, ಆದರೆ ನಿಯಮಿತ ಆಹಾರ ಮುಖ್ಯ.

2. ದಿನಕ್ಕೆ ಎಷ್ಟು ಬಾರಿ ತಿನ್ನಿಸಬೇಕು?

👉 4–5 ಬಾರಿ ಸಣ್ಣ ಪ್ರಮಾಣದಲ್ಲಿ ಕೊಡಬೇಕು.

3.ಜಂಕ್ ಫುಡ್ ಕೊಡಿದ್ರೆ ತೂಕ ಹೆಚ್ಚುತ್ತದೆಯಾ?

👉 ಹೌದು, ನೈಸರ್ಗಿಕವಾಗಿರುವುದಿಲ್ಲ ಮನೆಯ ನೈಸರ್ಗಿಕ ಆಹಾರವನ್ನು ಕೊಡುವುದು ಉತ್ತಮ.

ನನ್ನ ಮತ್ತೊಂದು ಲೇಖನದಲ್ಲಿ ಮಕ್ಕಳಿಗೆ ಯಾವ ಆಹಾರ  ಕೊಡಬಾರದು ಎಂದು ನಾನು ಈಗಾಗಲೇ ತಿಳಿಸಿದ್ದೇನೆ. ಓದಿ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ 👇https://www.aarogyawithanitha.com/2026/03/kids-food-avoid-kannada.html


Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery