ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.
ಮಗು ಬೇಗ ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರ ಬಹಳ ಮುಖ್ಯ. ಹಳೆಯ ಕಾಲದಲ್ಲಿ ಅಜ್ಜಿ-ಅಮ್ಮಂದಿರು ಮಕ್ಕಳಿಗೆ ಮನೆಯಲ್ಲೇ ಗಂಜಿ ಪೌಡರ್ ಮಾಡಿ ಕೊಡುತ್ತಿದ್ದರು. ಈ ಗಂಜಿ ಪೌಡರ್‌ನಲ್ಲಿ ಹಲವು ಧಾನ್ಯಗಳ ಪೌಷ್ಟಿಕಾಂಶ ಇರುತ್ತದೆ. ಇದು ಮಕ್ಕಳಿಗೆ ಶಕ್ತಿ ನೀಡಿ ತೂಕ ಹೆಚ್ಚಲು ಸಹಾಯ ಮಾಡುತ್ತದೆ. ಹಲವಾರು ತಾಯಂದಿರು ಮಕ್ಕಳು ಏಕೆ ದಪ್ಪವಾಗುತ್ತಿಲ್ಲ, ಎಂದು ಚಿಂತಿಸುತ್ತ ಇರುತ್ತಾರೆ ಬಹಳಷ್ಟು ಸಿರಪ್ ಪೌಡರ್ ಗಳನ್ನು ಸಹ ಪ್ರಯೋಗ ಮಾಡಿರುತ್ತಾರೆ. ಆದರೆ ಅವು ಯಾವು ಉಪಯೋಗಕ್ಕೆ ಬಾರದಂತಾಗುತ್ತದೆ. ಮೊದಲು ಹಲವು ವಿಷಯಗಳನ್ನು ನಾನು ನಿಮಗೆ ತಿಳಿಸುತ್ತೇನೆ. ಮಕ್ಕಳಿಗೆ ಚೆನ್ನಾಗಿ ಹಸಿವಾದರೆ ಮಾತ್ರ ಮಕ್ಕಳು ಊಟ ಮಾಡುತ್ತಾರೆ ಇಲ್ಲವಾದರೆ ಯಾವುದೇ ರೀತಿಯ ಆಹಾರವನ್ನು ಅವು ಸೇವಿಸುವುದಿಲ್ಲ. ಮಕ್ಕಳಿಗೆ ಆದಷ್ಟು ಮನೆಯ ಆಹಾರವನ್ನೇ ನೀಡಿ ಯಾವುದೇ ರೀತಿಯ ಮೈದಾ ರಹಿತ ಬಿಸ್ಕೆಟ್ಸ್ ,ಚಾಕ್ಲೆಟ್ಸ್ ಗಳನ್ನು ನೀಡಬೇಡಿ. ಇವುಗಳು ಆದಷ್ಟು ಮಕ್ಕಳ ಹೊಟ್ಟೆಯನ್ನು ಬಿಗಿಗೊಳಿಸುತ್ತವೆ. ಮಕ್ಕಳು ಮಂದವಾಗುತ್ತಾರೆ.
ಸರಿ ಹಾಗಾದರೆ ನಾನು ಮಕ್ಕಳು ದಪ್ಪಗಾಗಲು ಅಜ್ಜಿ ಗಂಜಿಯ ರಹಸ್ಯವನ್ನು ನಿಮಗೆ ತಿಳಿಸುತ್ತೇನೆ.ಹಾಗೂ ತಯಾರಿಸುವ ವಿಧಾನವನ್ನು ಸಹ ಹೇಳಿಕೊಡುತ್ತೇನೆ ಬನ್ನಿ.
ಬೇಕಾಗುವ ಪದಾರ್ಥಗಳು:
ರಾಗಿ – 1 ಕಪ್
ಅಕ್ಕಿ – 1 ಕಪ್
ಹೆಸರುಬೇಳೆ – ½ ಕಪ್
ಕಡಲೆಬೇಳೆ – ½ ಕಪ್
ಬಾದಾಮಿ – 8 ರಿಂದ 10
ಮಾಡುವ ವಿಧಾನ:
ಎಲ್ಲಾ ಧಾನ್ಯಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಬೇಕು.
ನಂತರ ರಾಗಿ, ಅಕ್ಕಿ, ಹೆಸರುಬೇಳೆ ಮತ್ತು ಕಡಲೆಬೇಳೆಯನ್ನು ಬೇರೆ ಬೇರೆಯಾಗಿ ಸ್ವಲ್ಪ ಹುರಿಯಬೇಕು.
ಬಾದಾಮಿ, ಒಂದೆರಡು ಗೋಡಂಬಿ ಪಿಸ್ತಾ ಸಹ ಸ್ವಲ್ಪ ಬೆಚ್ಚಗೆ ಮಾಡಿ ಹುರಿಯಬಹುದು.
ಎಲ್ಲ ಪದಾರ್ಥಗಳು ತಣ್ಣಗಾದ ನಂತರ ಮಿಕ್ಸರ್‌ನಲ್ಲಿ ನುಣ್ಣಗೆ ಪುಡಿ ಮಾಡಬೇಕು. ಬಾದಾಮಿ ಒಂದೆರಡು ಗೋಡಂಬಿ ಪಿಸ್ತಾ ಇವುಗಳನ್ನು ಸಪರೇಟ್ ಪುಡಿ ಮಾಡಿ ಅವುಗಳ ಜೊತೆಗೆ ಪುಡಿ ಮಾಡಿದ್ದಾರೆ ಗಂಟಾಗುವ ಸಾಧ್ಯತೆ ಇರುತ್ತದೆ. ಒಂದು ಪಾತ್ರೆಯಲ್ಲಿ ಇವುಗಳೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಹಾರಿದ ನಂತರ ಈ ಪೌಡರ್ ಅನ್ನು ಸ್ವಚ್ಛ ಡಬ್ಬಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು.
ಗಂಜಿ ಮಾಡುವ ವಿಧಾನ:
ಒಂದು ಗ್ಲಾಸ್ ನೀರಿಗೆ 1–2 ಚಮಚ ಗಂಜಿ ಪೌಡರ್ ಹಾಕಬೇಕು.
ಚೆನ್ನಾಗಿ ಕಲೆಸಿ ಮೃದುವಾಗಿ ಕುದಿಸಬೇಕು.
ಕೊನೆಯಲ್ಲಿ ಸ್ವಲ್ಪ ಬೆಲ್ಲ ಅಥವಾ ಉಪ್ಪು ಹಾಕಿ ಮಗುವಿಗೆ ಕೊಡಬಹುದು.
ಲಾಭಗಳು:
ಮಕ್ಕಳಿಗೆ ಶಕ್ತಿ ನೀಡುತ್ತದೆ
ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ತೂಕ ಹೆಚ್ಚಲು ಸಹಕಾರಿ.
ಸುಲಭವಾಗಿ ಜೀರ್ಣವಾಗುತ್ತದೆ.
ಈ ರೀತಿ ಮನೆಯಲ್ಲೇ ತಯಾರಿಸಿದ ಗಂಜಿ ಪೌಡರ್ ಮಗುವಿಗೆ ಪೌಷ್ಟಿಕ ಆಹಾರವಾಗುತ್ತದೆ.
ಇದು ನಮ್ಮ ಅಜ್ಜಿ ನನ್ನ ಮಕ್ಕಳಿಗೆ ಮಾಡಿಕೊಡುತ್ತಿದ್ದಂತಹ ಒಂದು ಸಿರಿಧಾನ್ಯಗಳ ಗಂಜಿ, ಅದನ್ನು ನಾನು ನಿಮಗೆ ತಿಳಿಸಿದ್ದೇನೆ ನಿಮಗೆ ಉಪಯೋಗವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಮಗು ಆರೋಗ್ಯಕರವಾಗಿ ಬೆಳೆಯಲು ಪೌಷ್ಟಿಕ ಆಹಾರ ಬಹಳ ಮುಖ್ಯ. ಮನೆಯಲ್ಲೇ ತಯಾರಿಸಿದ ಗಂಜಿ ಪೌಡರ್ ಮಕ್ಕಳಿಗೆ ಶಕ್ತಿ ನೀಡುತ್ತದೆ ಮತ್ತು ತೂಕ ಹೆಚ್ಚಲು ಸಹಾಯ ಮಾಡುತ್ತದೆ. ಈ ಸರಳ ಅಜ್ಜಿ ಮನೆಮದ್ದು ಮಕ್ಕಳ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿದೆ.
Comments
Post a Comment