ಮಕ್ಕಳಿಗೆ ಹಸಿವಾಗಲು ಏನು ಮಾಡಬೇಕು? ಮಕ್ಕಳಿಗೆ ಚೆನ್ನಾಗಿ ಊಟ ಮಾಡುವ ಸರಳ ವಿಧಾನಗಳು

ಮಕ್ಕಳಿಗೆ ಅಜೀರ್ಣ ಸಮಸ್ಯೆ ಕಡಿಮೆ ಮಾಡುವ ಉಪಾಯಗಳು.


ಈಗಿನ ಕಾಲದ ಕೆಲವು ಮಕ್ಕಳು ಅತಿಯಾದ ಹೊರಗಿನ ತಿಂಡಿ ಇಂದ ಸರಿಯಾಗಿ ಊಟ ಮಾಡದೆ, ಬಹುಬೇಗನೆ ಆರೋಗ್ಯದ ಸ್ಥಿತಿಯನ್ನು ಸಮತೋಲನದಲ್ಲಿಟ್ಟುಕೊಳ್ಳದೆ, ಹಾಗೂ ಬೇಕರಿಯ ವಿವಿಧ ಬಣ್ಣ ಬಣ್ಣದ, ಕೇಕುಗಳು ಐಸ್ ಕ್ರೀಮ್ ಗಳು ಬಿಸ್ಕೆಟ್ ಗಳು, ಪಿಜ್ಜಾ ,ಬರ್ಗರ್, ಫ್ರೆಂಚ್ ಪ್ರೈಸ್, ನಂತಹ ಆಹಾರದ ಮೊರೆ ಹೋಗಿ ಮಕ್ಕಳಿಗೆ ಜೀರ್ಣಕ್ರಿಯೆ ಸರಿಯಾಗಿ ಆಗದೆ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಮಲಮೂತ್ರ ವಿಸರ್ಜನೆ ಮಾಡಲು ಕಷ್ಟಪಡುವುದು ಊಟದ ಮೇಲೆ ಆಸಕ್ತಿ ಇಲ್ಲದೆ ಇರುವುದು, ವಾಂತಿ ಬೇಧಿ. ಇನ್ನು ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಮುಖ್ಯ ಕಾರಣ ಮನೆ ಊಟ ತಿನ್ನದೇ ಹೊರಗಿನ ಫ್ಯಾನ್ಸಿ ಊಟಗಳ ಮೊರೆ ಹೋಗುವುದೇ ಕಾರಣವಾಗಿದೆ. ಇದನ್ನು ಸರಿಪಡಿಸಲು ಕೆಲವು ಉಪಾಯಗಳನ್ನು ನಾನು ನೀಡುತ್ತೇನೆ. ಇದನ್ನು ನಮ್ಮ ಅಜ್ಜಿಯಿಂದ ನಾನು ಕಲಿತದ್ದು, 

ಮಕ್ಕಳಿಗೆ ಅಜೀರ್ಣವಾದಾಗ ಏನು ಮಾಡಬೇಕು?

ಸಣ್ಣ ಮಕ್ಕಳಲ್ಲಿ ಕೆಲವೊಮ್ಮೆ ಅಜೀರ್ಣ ಸಮಸ್ಯೆ ಕಾಣಿಸಬಹುದು. ಹೆಚ್ಚು ತಿನ್ನುವುದು, ಜೀರ್ಣವಾಗಲು ಕಷ್ಟವಾದ ಆಹಾರ ತಿನ್ನುವುದು ಅಥವಾ ಅನಿಯಮಿತ ಆಹಾರ ಸಮಯದಿಂದ ಅಜೀರ್ಣವಾಗಬಹುದು. ಈ ಸಮಯದಲ್ಲಿ ಮಕ್ಕಳಿಗೆ ಸರಿಯಾದ ಆಹಾರ ಮತ್ತು ಆರೈಕೆ ನೀಡುವುದು ತುಂಬಾ ಮುಖ್ಯ.

ಅಜೀರ್ಣ ಕಡಿಮೆ ಮಾಡಲು ಸರಳ ಮನೆಮದ್ದುಗಳು


1. ಜೀರಿಗೆ ನೀರು

ಸ್ವಲ್ಪ ಜೀರಿಗೆ ನೀರಲ್ಲಿ ಕುದಿಸಿ ತಣ್ಣಗಾದ ನಂತರ ಸ್ವಲ್ಪ ಪ್ರಮಾಣದಲ್ಲಿ ಕೊಟ್ಟರೆ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡಬಹುದು.

2. ಬೆಚ್ಚಗಿನ ನೀರು

ಮಕ್ಕಳಿಗೆ ಸ್ವಲ್ಪ ಬೆಚ್ಚಗಿನ ನೀರು ಕೊಟ್ಟರೆ ಹೊಟ್ಟೆಯ ಅಸಹನೆ ಕಡಿಮೆಯಾಗಬಹುದು.

3. ಗ್ರೇಪ್ ವಾಟರ್ ಅಥವಾ ಹೋಂ ವಾಟರ್ 

ಸಾಧಾರಣವಾಗಿ ಇದು ಸ್ಥಳೀಯ ಮೆಡಿಕಲ್ ಶಾಪ್ಗಳ ಬಳಿ ನಿಮಗೆ ಲಭ್ಯವಾಗುತ್ತದೆ ಹಾಗೂ ಕಡಿಮೆ ಬೆಲೆಯಲ್ಲೂ ಸಹ ಇದು ಸಿಗುತ್ತದೆ ಇದನ್ನು ಒಂದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೋಂ ವಾಟರ್ ಹಾಗೂ ಒಂದು ವರ್ಷದ ಆರು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಗ್ರೇಪ್ ವಾಟರ್ ನೀಡಿದರೆ ಸಹ ಕಡಿಮೆ ಮಾಡಬಹುದು. ಎಷ್ಟು ಪ್ರಮಾಣ ಕೊಡಬೇಕೆಂದರೆ ಆರು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಗ್ರೇಪ್ ವಾಟರ್ ಕೇವಲ ಒಂದು ಚಮಚ ಮಾತ್ರ, ಒಂದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೋಂ ವಾಟರ್ ಎರಡು ಚಮಚ ಹಾಗೂ ಮೂರ್ನಾಲ್ಕು ವರ್ಷದ ಮಕ್ಕಳಿಗೆ ನಾಲ್ಕು ಚಮಚಗಳನ್ನು ಸಹ ನೀಡಬಹುದು.
4)ಜೇನುತುಪ್ಪಕ್ಕೆ  ಒಂದು ತೊಟ್ಟು ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಒಂದು ಸ್ಪೂನ್ ನಷ್ಟು ಕೊಡುವುದರಿಂದ ಬಹುಬೇಗ ಅಜೀರ್ಣ ಕಡಿಮೆ ಆಗುತ್ತದೆ.

ಗಮನಿಸಬೇಕಾದ ವಿಷಯಗಳು

ತುಂಬಾ ಎಣ್ಣೆಯ ಆಹಾರ ತಪ್ಪಿಸಿ.
ಮಕ್ಕಳಿಗೆ ಅತಿಯಾಗಿ ತಿನ್ನಲು ಒತ್ತಾಯ ಮಾಡಬೇಡಿ.
ಸ್ವಚ್ಛ ಮತ್ತು ತಾಜಾ ಆಹಾರ ನೀಡುವುದು ಉತ್ತಮ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಮಕ್ಕಳಿಗೆ ಅಜೀರ್ಣದ ಜೊತೆ ತೀವ್ರ ಹೊಟ್ಟೆ ನೋವು, ನಿರಂತರ ವಾಂತಿ ಅಥವಾ ಜ್ವರ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಸಾರಾಂಶ:

ಸರಿಯಾದ ಆಹಾರ ಮತ್ತು ಸರಳ ಮನೆಮದ್ದುಗಳಿಂದ ಮಕ್ಕಳಲ್ಲಿ ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಮಕ್ಕಳ ಆರೋಗ್ಯದ ಬಗ್ಗೆ ಸದಾ ಗಮನ ಕೊಡುವುದು ಮುಖ್ಯ.

ಮುಂದಿನ ಲೇಖನ ತಪ್ಪದೇ ಓದಿ:

ಮಕ್ಕಳಿಗೆ ಜ್ವರ ಬಂದಾಗ ಮನೆಯಲ್ಲೇ ಮಾಡಬಹುದಾದ 5 ಸರಳ ಮನೆಮದ್ದುಗಳು.

Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery