ಮಕ್ಕಳಿಗೆ ಜ್ವರ ಬಂದಾಗ 5 ಸರಳ ಆರೈಕೆ:
ಮಕ್ಕಳಿಗೆ ಜ್ವರ ಬಂದಾಗ ಅಮ್ಮನ ಆರೈಕೆ.
ಮಕ್ಕಳಲ್ಲಿ ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಾಗಿದೆ. ವಾತಾವರಣ ಬದಲಾವಣೆ, ಸೋಂಕು ಅಥವಾ ಶೀತದಿಂದ ಮಕ್ಕಳಿಗೆ ಜ್ವರ ಬರಬಹುದು. ಈ ಸಮಯದಲ್ಲಿ ತಾಯಂದಿರು ಶಾಂತವಾಗಿ ಮತ್ತು ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಆರೈಕೆ ಮಾಡುವುದು ಮುಖ್ಯ.
ಜ್ವರದ ಲಕ್ಷಣಗಳು?
ಮಕ್ಕಳಿಗೆ ಜ್ವರ ಬಂದಾಗ ಈ ಲಕ್ಷಣಗಳು ಕಾಣಿಸಬಹುದು:
☑ದೇಹ ಬಿಸಿ ಆಗುವುದು
☑ದುರ್ಬಲತೆ ಅಥವಾ ಸುಸ್ತು
☑ಊಟಕ್ಕೆ ಆಸಕ್ತಿ ಕಡಿಮೆ
☑ಕೆಲವೊಮ್ಮೆ ತಲೆನೋವು ಅಥವಾ ದೇಹನೋವು
ಮಕ್ಕಳಿಗೆ ಜ್ವರ ಬಂದಾಗ ನಮ್ಮಂತ ತಾಯಂದಿರು ಆತಂಕ ಪಡುವುದು ಸಹಜ. ಆದರೆ ಕೆಲವು ಸರಳ ಆರೈಕೆ ವಿಧಾನಗಳನ್ನು ಮನೆಯಲ್ಲೇ ಅನುಸರಿಸಿದರೆ ಮಕ್ಕಳಿಗೆ ಆರಾಮ ಸಿಗಬಹುದು. ಕೆಲವು ಸರಳ ಆರೈಕೆಗಳನ್ನು ನಿಮಗೆ ತಿಳಿಸುತ್ತೇನೆ.
ಮಕ್ಕಳ ಜ್ವರ ಕಡಿಮೆ ಮಾಡಲು 5 ಸರಳ ಆರೈಕೆಗಳು.
1)ಮಕ್ಕಳಿಗೆ ವಿಶ್ರಾಂತಿ ಕೊಡಿಸಿ.
ಜ್ವರ ಇದ್ದಾಗ ಮಕ್ಕಳು ಹೆಚ್ಚು ಓಡಾಡಬಾರದು. ಆಟ ಆಡಬಾರದು, ಇವುಗಳಿಂದ ಸ್ವಲ್ಪ ವಿರಾಮ ಕೊಡಿಸುವುದು,ಅವರಿಗೆ ಸಾಕಷ್ಟು ವಿಶ್ರಾಂತಿ ಕೊಡಿಸಿದರೆ ದೇಹ ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.
2)ಹೆಚ್ಚು ನೀರು ಮತ್ತು ದ್ರವ ಪದಾರ್ಥ ಕೊಡಿ.
ಮಕ್ಕಳಿಗೆ ಬೆಚ್ಚಗಿನ ನೀರು, ಸೂಪ್ ಅಥವಾ ರಾಗಿ ಗಂಜಿ ಕೊಟ್ಟರೆ ದೇಹ ಹೈಡ್ರೇಟ್ ಆಗಿ ಜ್ವರದ ಸಮಯದಲ್ಲಿ ದುರ್ಬಲತೆ ಕಡಿಮೆಯಾಗುತ್ತದೆ.
3)ಹಗುರವಾದ ಊಟಗಳನ್ನು ನೀಡಿ.
ಜ್ವರ ಇದ್ದಾಗ ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವ ಆಹಾರ ಕೊಡುವುದು ಉತ್ತಮ. ಮನೆಯಲ್ಲೇ ರುಬ್ಬಿದ ಮೋಸಂಬಿ ಅಥವಾ ಪೈನಾಪಲ್ ಹಣ್ಣುಗಳನ್ನು ಕಟ್ ಮಾಡಿ ಕೊಡಿ. ಊಟಕ್ಕೆ ಅನ್ನ ಮತ್ತುರಸಂ.
4)ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಮಕ್ಕಳ ದೇಹವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಇದರಿಂದ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ
5) ಮಕ್ಕಳ ಆರೋಗ್ಯವನ್ನು ಗಮನಿಸಿ.
ಜ್ವರ ಎರಡು ದಿನಕ್ಕಿಂತ ಹೆಚ್ಚು ಇದ್ದರೆ ಅಥವಾ ಮಕ್ಕಳಿಗೆ ತುಂಬಾ ದುರ್ಬಲತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಅನುಭವದ ಮಾತು:
ಮಕ್ಕಳು ಜ್ವರ ಬಂದಾಗ ತುಂಬಾ ಹಠ ಮಾಡುವುದು ಊಟ ತಿನ್ನಲು ಅಳುವುದು ಮಾಡುತ್ತಿರುತ್ತಾರೆ. ಆಗ ನಾವು ಅವರಿಗೆ ಸಂತೈಸಿ ,ಪ್ರೀತಿಯಿಂದ ಕೋಪ ಮಾಡಿಕೊಳ್ಳದೆ ಹಾರೈಕೆ ಮಾಡುವುದು ಮುಖ್ಯ. ಹೇಗೆಂದರೆ ಉದಾಹರಣೆಗೆ: ಊಟ ಮಾಡಿದರೆ ನಿಮಗೆ ಇಷ್ಟವಾದ ವಸ್ತುಗಳನ್ನು ಕೊಡಿಸುತ್ತೇನೆ, ಇಷ್ಟವಾದ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ, ಹೀಗೆ ಇನ್ನಿತರ ಮಾತುಗಳನ್ನು ಅವರಿಗೆ ಹೇಳುತ್ತಾ ಊಟ ಮಾಡಿಸಿದರೆ ಬಹಳ ಉತ್ತಮ. ಜ್ವರ ಇದ್ದಾಗ ದಿನಕ್ಕೆ ಎರಡು ಬಾರಿ ಬೆಚ್ಚಗಿನ ನೀರಿನಲ್ಲಿ ಮೈ ತೊಳಿಯಿರಿ ಯಾವುದೇ ಸೋಪುಗಳನ್ನು ಬಳಸಬೇಡಿ ಬರೀ ನೀರಿನಲ್ಲಿ ಮಾತ್ರ ಮೈ ತೊಳೆದು ಬಟ್ಟೆ ಹಾಕಿ. ತಲೆ ಸ್ನಾನ ಬೇಡ.
ಕಿರು ಮಾತು ಮಾತು
ಮಕ್ಕಳಿಗೆ ಜ್ವರ ಬಂದಾಗ ಸರಿಯಾದ ಆರೈಕೆ ಮತ್ತು ಪೌಷ್ಟಿಕ ಆಹಾರ ನೀಡಿದರೆ ಅವರು ಬೇಗ ಚೇತರಿಸಿಕೊಳ್ಳಬಹುದು. ಜ್ವರ ಹೆಚ್ಚು ದಿನ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.
ನಿಮಗೆ ಬೇಕಾದಲ್ಲಿ ಮಕ್ಕಳಿಗೆ ಅಜೀರ್ಣ ಕಡಿಮೆ ಮಾಡುವುದು ಹೇಗೆ ಎಂಬುದನ್ನು ಈಗಾಗಲೇ ಲೇಖನದಲ್ಲಿ ವಿವರಿಸಿದ್ದೇನೆ. 👉ಅದನ್ನು ಓದಿ ನೋಡಿ ನಿಮಗೆ ಇಷ್ಟವಾದರೆ ಶೇರ್ ಮಾಡಿ.👇👇
https://namstylekannada.blogspot.com/2026/03/makkalige-ajirna-adaga-enu-madabeku.html
Comments
Post a Comment