ಅಲೋವೆರಾ ಲಾಭಗಳು – ಈ ಒಂದು ಗಿಡ ಸಾಕು ನಿಮ್ಮ ಎಲ್ಲಾ ಸಮಸ್ಯೆಗೆ!
ಅಲೋವೆರಾ ಉಪಯೋಗಗಳು – ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಶಕ್ತಿಯುತ ಮನೆಮದ್ದು
ಇವುಗಳನ್ನು ಕೆಲವರು ಮನೆಯ ಮುಂದೆ ಕಂಡರೂ ಅಥವಾ ತನ್ನಷ್ಟಕ್ಕೆ ತಾನೇ ಬೆಳೆದು ನಿಂತಿದ್ದರೂ ಅದರ ಪ್ರಯೋಜನವನ್ನು ಅರಿಯದೆ ನಿರ್ಲಕ್ಷಿಸುತ್ತಾರೆ. ಹಾಗಾದರೆ ಈ ಗಿಡದ ಪ್ರಯೋಜನವನ್ನು ಈ ಲೇಖನದಲ್ಲಿ ನಾವು ತಿಳಿಯೋಣ.
ಅಲೋವೆರಾ ಉಪಯೋಗಗಳು
1.ರೋಗ ನಿರೋಧಕ ಶಕ್ತಿ
ಅಲೋವೆರಾ ದೇಹದ immunity ಹೆಚ್ಚಿಸಿ ದೇಹವನ್ನು ಒಳಗಿನಿಂದ ಶುದ್ದಿಗೊಳಿಸಲು ಸಹಾಯ ಮಾಡುತ್ತದೆ ಆದರೆ ಸ್ವಲ್ಪ ಪ್ರಮಾಣದಲ್ಲಿ ಕುಡಿಯುವುದು ಉತ್ತಮ.
ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ.
2.ಗಾಯ ಮತ್ತು ಸುಟ್ಟ ಗಾಯಗಳಿಗೆ ಉತ್ತಮ
ಅಲೋವೆರಾ ಜೆಲ್ ಅನ್ನು ಚರ್ಮದ ಕಡೆತ ಹಾಗೂ ಸುಟ್ಟ ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗ ಗುಣಮುಖವಾಗಲು ಸಹಾಯ ಮಾಡಿ,ಚರ್ಮದ ಉರಿಯೂತ ಕಡಿಮೆ ಮಾಡುತ್ತದೆ.
3.ಕೂದಲು ಬೆಳವಣಿಗೆಗೆ ಸಹಾಯಕ
ಹೌದು. ಅಲೋವೆರಾ ಕೂದಲಿನ ಬುಡಗಳನ್ನು ಗಟ್ಟಿಗೊಳಿಸಿ. ಹೇರ್ ಫಾಲ್ ಕಡಿಮೆ ಮಾಡುತ್ತದೆ ಹಾಗೂ dandruff ಸಮಸ್ಯೆ ನಿಯಂತ್ರಿಸಿ ಕೂದಲಿನ ಬೇರುಗಳಿಗೆ ಪೋಷಣೆಯನ್ನು ನೀಡುತ್ತದೆ.
4.ಚರ್ಮದ ಆರೈಕೆ
ಅಲೋವೆರಾ ಮುಖದಲ್ಲಿನ ಮೊಡವೆಗಳನ್ನು ಕಡಿಮೆ ಮಾಡಿ ಮುಖದಲ್ಲಿ ಯಾವುದೇ ರೀತಿಯ acne ಮಾರ್ಕ್ ಗಳಿದ್ದರೆ ಅದನ್ನು ನಿಯಂತ್ರಿಸುತ್ತದೆ. ಅಲೋವೆರಾ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುಕ್ತವಾಗಿ ಹಾಗೂ ಮೃದುವಾಗಿ ತೇವಾಂಶದಿಂದ ಕೂಡಿರುತ್ತದೆ. ಅಲೋವೆರಾ ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ.
5.ಜೀರ್ಣಕ್ರಿಯೆ ಸುಧಾರಿಸುತ್ತದೆ
ಅಲೋವೆರಾ ಜ್ಯೂಸನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಎದೆ ಉರಿ, ರಕ್ತ ಸಂಚಾರ ಸುಧಾರಣೆಗೆ ಹಾಗೂ ಮಲ ವಿಸರ್ಜಿಸಲು ಕಷ್ಟಪಡುವವರು ಇದನ್ನು ಬಳಸಬಹುದು.
ಬಳಸುವ ವಿಧಾನ
• ಅಲೋವೆರಾ ಎಲೆಯನ್ನು ಕತ್ತರಿಸಿ ಒಳಗಿನ ಜೆಲ್ ತೆಗೆದುಕೊಳ್ಳಿ.
• ಮುಖಕ್ಕೆ ಅಥವಾ ತಲೆಗೆ ಹಚ್ಚಿ 20 ನಿಮಿಷ ಬಿಡಿ ನಂತರ ತೊಳೆಯಿರಿ.
• ಗಾಯ ಅಥವಾ ಸುಟ್ಟ ಜಾಗಕ್ಕೆ ನೇರವಾಗಿ ಹಚ್ಚಬಹುದು.
• ಜ್ಯೂಸ್ ಕುಡಿಯುವಾಗ 20–30 ml ಮಾತ್ರ ನೀರಿನಲ್ಲಿ ಬೆರೆಸಿ ಸೇವಿಸಿ.
ಗಮನಿಸಬೇಕಾದದ್ದು
✒ಹೆಚ್ಚು ಪ್ರಮಾಣದಲ್ಲಿ ಬಳಸಬೇಡಿ
✒ಎಲೆಯ ಹಳದಿ ಭಾಗ (latex) ತೆಗೆದು ಹಾಕಿ
✒allergy ಇದ್ದರೆ ಮೊದಲು test ಮಾಡಿ
✒ಗರ್ಭಿಣಿಯರು ವೈದ್ಯರ ಸಲಹೆ ಪಡೆಯಿರಿ
ನನ್ನ ಮತ್ತೊಂದು ಲೇಖನದಲ್ಲಿ ತೂಕ ಇಳಿಕೆ ಮಾಡುವ ಆರೋಗ್ಯಕರ ಪಾನಿಯಗಳ ಬಗ್ಗೆ ತಿಳಿಸಲಾಗಿದೆ. ಅದನ್ನು ಸಹ ಓದಿ 👇
https://www.aarogyawithanitha.com/2026/03/tooka-ilike-arogyakara-paniyagalu.jpg.html
ಕೊನೆಯ ಮಾಹಿತಿ
ಅಲೋವೆರಾವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ. ಇದಕ್ಕೆ ಯಾವುದೇ ರೀತಿಯ ದುಬಾರಿ ಹಣ ಬೇಕಾಗಿಲ್ಲ ಉಪಯೋಗಿಸಿ ಪ್ರಯೋಜನ ಪಡೆದುಕೊಳ್ಳಿ.

Comments
Post a Comment