ಬೋಳು ತಲೆ ಸಮಸ್ಯೆ? ಕೂದಲು ಮತ್ತೆ ಬೆಳೆಯುವ ಸರಳ ಉಪಾಯಗಳು!

ಬೋಳುತಲೆ ಆಗ್ತಿದ್ಯಾ! ಕಾರಣ ಗೊತ್ತೇ?


ಇಂದಿನ ದಿನಗಳಲ್ಲಿ ಬೋಳು ತಲೆ (Hair Loss / Baldness) ಸಮಸ್ಯೆ ಪುರುಷರಿಗೆ ಮಾತ್ರವಲ್ಲ ಮಹಿಳೆಯರಲ್ಲೂ ಕಾಣುತ್ತೇವೆ. ಸರಿಯಾದ ಆರೈಕೆ ಮತ್ತು ಆಹಾರದಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಹಾಗಾದರೆ ಇವುಗಳ ಕಾರಣ ಏನಿರಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ.

ಬೋಳು ತಲೆ ಏಕೆ ಬರುತ್ತದೆ?

ನಮ್ಮ ಆಧುನಿಕ ಪ್ರಪಂಚದಲ್ಲಿ ಬೋಳು ತಲೆ ಬರಲು ಅತಿಯಾದ ಒತ್ತಡ , ಹಾರ್ಮೋನ್ ಬದಲಾವಣೆ, ಪೋಷಕಾಂಶಗಳ ಕೊರತೆ, ಹೆಚ್ಚು ಕೆಮಿಕಲ್ ಇರುವ ಶಾಂಪುಗಳನ್ನು ಬಳಸುವುದು ಮತ್ತು ವಂಶಪಾರಂಪರ್ಯವಾಗಿ (Genetics) ಕೂಡ ಕಾರಣವಾಗಬಹುದು. ಹಾಗಾದರೆ ಇವುಗಳ ಪರಿಹಾರವೇನು? ಇವುಗಳನ್ನು ಅತಿ ಹೆಚ್ಚು ಖರ್ಚಿಲ್ಲದೆ ಹೇಗೆ ತಡೆಗಟ್ಟಬಹುದು ಎಂದು ತಿಳಿಯೋಣ. 

ಮನೆ ಮದ್ದುಗಳು 

1. ಎಣ್ಣೆ ಮಸಾಜ್ 

ವಾರದಲ್ಲಿ ಎರಡು ಬಾರಿ ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಹಾಗೂ ಬೆಚ್ಚಗೆ ಮಾಡಿ ತಲೆಗೆ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಹೆಚ್ಚಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

2. ಈರುಳ್ಳಿ ರಸ

ಮಿಕ್ಸಿ ಜಾರ್ ನಲ್ಲಿ ಈರುಳ್ಳಿಯನ್ನು ತುಂಡುಗಳಾಗಿ ಕತ್ತರಿಸಿ ರುಬ್ಬಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತವೆ.

3.ಮೆಂತ್ಯ ಕಾಳು ಪೇಸ್ಟ್

ಮೆಂತ್ಯ ಕಾಳುಗಳನ್ನು ನೆನೆಸಿ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಗಟ್ಟಿಯಾಗುತ್ತದೆ. ಅತಿಯಾದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4.ಅಲೋವೆರಾ ಜೆಲ್

ಅಲೋವೆರಾ ತಲೆ ಚರ್ಮವನ್ನು ತಂಪಾಗಿರಿಸಿ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ತಲೆಹೊಟ್ಟುನ್ನೂ ಸಹ ತಡೆಗಟ್ಟಲು ಸಹಕರಿಸಿ ಸೊಂಪಾದ ಕೂದಲು ನಿಮ್ಮದಾಗುತ್ತದೆ.

5.ಆಮ್ಲಾ (ನೆಲ್ಲಿಕಾಯಿ)

ಬೆಟ್ಟದ ನೆಲ್ಲಿಕಾಯಿಯನ್ನು ಪೇಸ್ಟ್ ತಯಾರಿಸಿ ಹಚ್ಚುವುದರಿಂದ ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ C ಇದೆ. ಇದು ಕೂದಲಿಗೆ ಯಾವುದೇ ಹಾನಿಕಾರಕವಲ್ಲ.

ನನ್ನ ಮತ್ತೊಂದು ಲೇಖನದಲ್ಲಿ ಚರ್ಮದ ಕಾಳಜಿಯನ್ನು ಹೇಗೆ ವಹಿಸುವುದು ಎಂಬುದನ್ನು ತಿಳಿಸಲಾಗಿದೆ ಅದನ್ನು ಸಹ ಓದಿ 👇

https://www.aarogyawithanitha.com/2026/04/charmada-kalaji-tips-kannada.html

ಅನುಭವದ ಮಾತು

ಅತಿಯಾದ ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವುದು ಕೂದಲಿಗೆ ಒಳ್ಳೆಯದಲ್ಲ ಹಾಗೂ ಪೋಷಕಾಂಶ ಯುಕ್ತ ಆಹಾರವನ್ನು ಸೇವಿಸುವುದು ಉತ್ತಮ. ಕೆಮಿಕಲ್ ಯುಕ್ತ ಶಾಂಪೂಗಳನ್ನು ಆದಷ್ಟು ಕಡಿಮೆ ಮಾಡಿ. ಯಾವುದೇ ರೀತಿಯ ಒತ್ತಡವನ್ನು ತಲೆಗೆ ತೆಗೆದುಕೊಳ್ಳಬೇಡಿ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರನ್ನು ಕುಡಿಯಿರಿ.

 ಗಮನಿಸಬೇಕಾದವು

☑ ತುಂಬಾ ಹೆಚ್ಚು ಕೂದಲು ಉದುರುತ್ತಿದ್ದರೆ ವೈದ್ಯರನ್ನು            ಸಂಪರ್ಕಿಸಿ
☑ ಮನೆಮದ್ದುಗಳಿಗೆ ಸಮಯ ಬೇಕು – patience ಇರಲಿ.

ಕೊನೆಯ ಸಲಹೆ 

ಬೋಳು ತಲೆ ಸಮಸ್ಯೆಯನ್ನು ಸರಿಯಾದ ಆರೈಕೆ ಮತ್ತು ಮನೆಮದ್ದುಗಳಿಂದ ನಿಯಂತ್ರಿಸಬಹುದು. ನಿಯಮಿತವಾಗಿ ಪಾಲಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ ಹಾಗೂ ನನ್ನ ವೆಬ್ಸೈಟ್ ಅನ್ನು ಫಾಲೋ ಮಾಡಿ.

Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery