ತಾಯಿ ಹಾಲಿನ ಶಕ್ತಿ – ಮಗುವಿನ ಬೆಳವಣಿಗೆಗೆ ಅತ್ಯುತ್ತಮ ರಹಸ್ಯ!
ಎದೆ ಹಾಲು: ಮಗುವಿನ ರೋಗ ನಿರೋಧಕ ಶಕ್ತಿಗೆ ಸೂಪರ್ ಫುಡ್
ಭಾರತೀಯ ಸಂಸ್ಕೃತಿಯಲ್ಲಿ ಎದೆ ಹಾಲು ಮಹತ್ವಪೂರ್ಣ ಜಾಗವನ್ನು ಪಡೆದಿದೆ. ಹುಟ್ಟಿದ ಮಗುವಿಗೆ ಮೊದಲ ಆಹಾರ ಪದ್ಧತಿಯೇ ಎದೆಹಾಲು. ತಾಯಿಯು ತನ್ನ ಕರುಳ ಬಳ್ಳಿಯನ್ನು ಬಿಗಿದಪ್ಪಿ ಮೊದಲ ಬಾರಿಗೆ ಎದೆ ಹಾಲು ನೀಡುವುದೇ ಬಹಳಷ್ಟು ಸುಂದರ. ಹಾಗಾದರೆ ಎದೆ ಹಾಲಿನಿಂದ ಆಗುವ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಯೋಣ.
ಎದೆ ಹಾಲಿನ ಲಾಭಗಳು:
1. ತಾಯಿ ಮಗುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ.
ಹೌದು . ಮಗುವಿಗೆ ಜನ್ಮ ನೀಡಲು ತಾಯಿ ಸಾಕಷ್ಟು ಹೆರಿಗೆ ನೋವನ್ನು ಪಡೆದಿದ್ದರೂ ಸಹ ಮಗು ಹುಟ್ಟಿದ ತಕ್ಷಣ ತನ್ನ ನೋವನ್ನೆಲ್ಲ ಮರೆಯುತ್ತಾಳೆ. ಮಗು ಅಳುವುದನ್ನು ಕಂಡು ತನ್ನ ಎದೆಯಾಲನ್ನು ನೀಡುತ್ತಾ ಹೆಚ್ಚು ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾಳೆ. ಮಗು ಸಹ ಅಮ್ಮನ ಬೆಚ್ಚಗಿನ ಕಂಕುಳಿನಲ್ಲಿ ಎದೆಹಾಲು ಕುಡಿಯುತ್ತಿರುತ್ತದೆ. ಇದರಿಂದ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ.
2.ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಎದೆ ಹಾಲಿನಲ್ಲಿ ಆಂಟಿ ಆಕ್ಸಿಡೆಂಟ್ ಇರುತ್ತವೆ, ಇದು ಮಗುವನ್ನು ಜ್ವರ, ಶೀತ, ಸೋಂಕುಗಳಿಂದ ರಕ್ಷಿಸುತ್ತದೆ. ಮಗುವಿಗೆ ಎದೆ ಹಾಲು ರಕ್ಷಾ ಕವಚದಂತೆ ಇರುತ್ತದೆ.
3.ಸಂಪೂರ್ಣ ಪೋಷಣೆಯ ಮೂಲ
ಎದೆ ಹಾಲು ಮಗುವಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಮಗುವಿನ ದೇಹದ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಯಾವುದೇ ಹಾನಿಕಾರಕ ಆಹಾರವಲ್ಲ ಯಾವಾಗಲೂ ಸ್ವಚ್ಛವಾಗಿರುತ್ತದೆ.
4. ಸುಲಭವಾಗಿ ಜೀರ್ಣವಾಗುತ್ತದೆ
ಫಾರ್ಮುಲಾ ಹಾಲುಗಳನ್ನು ಉಪಯೋಗಿಸುವುದರಿಂದ ಕೆಲವೊಂದು ಮಕ್ಕಳಿಗೆ ಹೊಟ್ಟೆಯ ಸಮಸ್ಯೆ ಎದುರಾಗಬಹುದು ಎದೆಹಾಲು ಕುಡಿಸುವುದರಿಂದ ಯಾವುದೇ ರೀತಿಯ ಅಪಾಯ ಮಗುವಿಗೆ ಬರುವುದಿಲ್ಲ ಸುಲಭವಾಗಿ ಜೀರ್ಣವಾಗುತ್ತದೆ.
5. ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯಕ
ಹೌದು. ಮೊದಲ ಆರು ತಿಂಗಳು ತಪ್ಪದೇ ಎದೆಹಾಲನ್ನು ನೀಡುವುದರಿಂದ ಮಗುವಿನ ಮೆದುಳು ಬಹಳಷ್ಟು ಅಭಿವೃದ್ಧಿ ಹೊಂದುತ್ತದೆ. ಮಗು ಚುರುಕುತನದಿಂದ ವರ್ತಿಸುತ್ತದೆ. ಬುದ್ಧಿವಂತಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನನ್ನ ಇನ್ನೊಂದು ಲೇಖನದಲ್ಲಿ ಬಾಣಂತಿಯರ ಆರೈಕೆ ಹಾಗೂ ಎದೆ ಹಾಲು ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿಸಲಾಗಿದೆ ಅದನ್ನು ಸಹ ಓದಿ.
https://www.aarogyawithanitha.com/2026/03/blog-post.html
ಅನುಭವದ ಮಾತು:
ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಯಾವಾಗಲೂ ಎರಡು-ಮೂರು ವರ್ಷಗಳ ಎದೆಹಾಲನ್ನು ನೀಡುತ್ತಿದ್ದರು. ಇದರಿಂದ ಸಾಕಷ್ಟು ಅನುಕೂಲವೂ ಸಹ ಆಗುತ್ತಿತ್ತು. ಹೇಗೆಂದರೆ ಮಗು ಗಟ್ಟಿ ಮುಟ್ಟಾಗಿಯೂ ಹಾಗೂ ಯಾವುದೇ ಕಾಯಿಲೆಗೆ ಒಳಗಾಗದೆ ಆರಾಮದಾಯಕವಾಗಿ ಇರುತ್ತಿದ್ದವು.ಎದೆ ಹಾಲು ಮಗುವಿನ ಸಂಪೂರ್ಣ ಆರೋಗ್ಯ ಮತ್ತು ಬೆಳವಣಿಗೆಗೆ ಅತ್ಯಂತ ಮುಖ್ಯ. ಮೊದಲ 6 ತಿಂಗಳು ಸಂಪೂರ್ಣವಾಗಿ ಎದೆ ಹಾಲು ನೀಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
ನನ್ನ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ ಹಾಗೂ ನನ್ನ ವೆಬ್ಸೈಟ್ ಅನ್ನು ಫಾಲೋ ಮಾಡಿ.
Comments
Post a Comment