ಮಕ್ಕಳಿಗೆ ಹಲ್ಲು ನೋವು? ಈ ಸರಳ ಮನೆಮದ್ದುಗಳು ಪ್ರಯೋಜನಕಾರಿಗಳು!

ಮಕ್ಕಳಿಗೆ ಹೆಚ್ಚಾದ ಹಲ್ಲು ನೋವು ಬಂದಾಗ ಪೋಷಕರು ಮಾಡಬೇಕಾದ ಕ್ರಮಗಳೇನು? 

ಈಗಿನ ಕಾಲದ ಮಕ್ಕಳು ಅತಿಯಾದ ಸೋಮಾರಿತನ ಹಾಗೂ ಆಲಸ್ಯದಿಂದ ಬೆಳಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜುವುದನ್ನು ನಿರ್ಲಕ್ಷಿಸುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಹುಳುಕಲ್ಲು ಸಮಸ್ಯೆ ಎದುರಾಗುತ್ತದೆ. ಇದು ಸರಳ ಸಾಮಾನ್ಯ ಸಮಸ್ಯೆಯಾದರೂ ನೋವು ಮಾತ್ರ ವಿಪರೀತ. ಹಾಗಾದರೆ ಹಲ್ಲು ನೋವಿಗೆ ಮನೆಮದ್ದುಗಳನ್ನು ಇಲ್ಲಿ ತಿಳಿದುಕೊಳ್ಳಿ. 

ಹುಳುಕಲ್ಲು ಎಂದರೇನು?

ಹಲ್ಲು ನಿಧಾನವಾಗಿ ಹಾಳಾಗುವ ಒಂದು ವಿಧಾನ(cavity). ಇದು ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಕಂಡು ಬರುತ್ತದೆ. ಕಪ್ಪು ಅಥವಾ ಬೂದಿ ಕಲೆಗಳು ಹಲ್ಲಿನ ಮೇಲೆ ಕಾಣಿಸುವುದು. ಹಾಗೂ ಆಹಾರ ಜಗಿಯಲು ಆಗದೆ ನೋವು ಪಡುವುದು. ಮತ್ತು ದುರ್ವಾಸನೆಯಿಂದ ಕೂಡಿರುವುದಾಗಿದೆ. 

ಮಕ್ಕಳಲ್ಲಿ ಬೇಗ ಹುಳುಕಲ್ಲು ಆಗುವ ಕಾರಣಗಳು?

• ಹಲ್ಲು ಬ್ರಶ್ ಮಾಡದೇ ಇರುವುದು

• ಜ್ಯೂಸ್ ಮತ್ತು ಸಕ್ಕರೆ ಪಾನೀಯಗಳು

• ಹೆಚ್ಚು ಸಿಹಿ (ಚಾಕಲೇಟ್, ಬಿಸ್ಕಟ್) ತಿನ್ನುವುದು

• ಹಾಲು ಕುಡಿದು ತಕ್ಷಣ ಮಲಗುವುದು

• ರಾತ್ರಿ ಫೀಡಿಂಗ್ ನಂತರ ಕ್ಲೀನ್ ಮಾಡದಿರುವುದು


ಮಕ್ಕಳ ಹಲ್ಲು ನೋವಿಗೆ ಮನೆಮದ್ದುಗಳು

ಗಮನಿಸಿ: ಇದು ಸಣ್ಣ ಸಮಸ್ಯೆಗೆ ಮಾತ್ರ.

☑ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ
☑ತೆಂಗಿನ ಎಣ್ಣೆ ಸ್ವಲ್ಪ ಹಲ್ಲಿಗೆ ಹಚ್ಚಬಹುದು
☑ಸಕ್ಕರೆ ಪದಾರ್ಥ ಕಡಿಮೆ ಮಾಡುವುದು
☑ದಿನಕ್ಕೆ 2 ಬಾರಿ ಬ್ರಶ್ ಮಾಡಿಸುವುದು
☑ಲವಂಗದ ನೀರಿನಿಂದ ಬಾಯಿ ಮುಕ್ಕಳಿಸಿ
☑ರಾತ್ರಿ ಊಟದ ನಂತರ ತಪ್ಪದೇ ಬ್ರಷ್ ಮಾಡಿಸಿ

ಯಾವಾಗ ಡಾಕ್ಟರ್ ಬಳಿ ಹೋಗಬೇಕು?

✒ಅತಿಯಾದ ಹಲ್ಲು ನೋವು ಇದ್ದರೆ.
✒ಹಲ್ಲಿನ ಊತ ಹಾಗೂ ಸೋಂಕು ಇದ್ದರೆ.
✒ಹಲ್ಲಿನ ಹೊಂಡ ಹೆಚ್ಚಾಗಿ ಕಾಣುತ್ತಿದ್ದರೆ.

ಕೊನೆಯ ಸಲಹೆ

ಮಕ್ಕಳಲ್ಲಿ ಹುಳುಕಲ್ಲು ಬೇಗ ಬರುತ್ತದೆ ಆದರೆ ಸರಿಯಾದ ಕಾಳಜಿಯಿಂದ ಅದನ್ನು ತಡೆಯಬಹುದು. ಸ್ವಚ್ಛತೆ ಮತ್ತು ಸರಿಯಾದ ಆಹಾರ ತುಂಬಾ ಮುಖ್ಯ. ಮಕ್ಕಳಲ್ಲಿ ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದನ್ನು ರೂಢಿ ಮಾಡಿಸುವುದು ಹುಳುಕಲ್ಲನ್ನು ತಡೆಯುವ ಪ್ರಮುಖ ವಿಧಾನ.

ನನ್ನ ಮತ್ತೊಂದು ಲೇಖನದಲ್ಲಿ ಮಕ್ಕಳಿಗೆ ಎತ್ತರ ಹೆಚ್ಚಿಸಲು ತಿನ್ನಬಹುದಾದ ಆಹಾರಗಳ ಬಗ್ಗೆ ತಿಳಿಸಲಾಗಿದೆ ಅದನ್ನು ಸಹ ಓದಿ 👇 https://www.aarogyawithanitha.com/2026/04/httpswww.aarogyawithanitha.comkids-height-increase-tips-kannada.html

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ.

Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery