ತೂಕ ಇಳಿಸೋಕೆ ಅನ್ನ ಸಂಪೂರ್ಣ ಬಿಡ್ಬೇಕಾ? ನಿಜವಾದ ಸತ್ಯ ತಿಳಿದುಕೊಳ್ಳಿ!
ತೂಕ ಇಳಿಸೋಕೆ ಅನ್ನ ಸಂಪೂರ್ಣ ಬಿಡ್ಬೇಕು ಅಂತ ಕೇಳಿದ್ದೀರಾ? ಆದರೆ ಇದು ನಿಮ್ಮ ದೊಡ್ಡ ತಪ್ಪಾಗಬಹುದು!
ಅನ್ನ ತಿನ್ನೋದ್ರಿಂದ ತೂಕ ಹೆಚ್ಚಾಗುತ್ತಾ?
ಅನ್ನದಲ್ಲಿ ಕಾರ್ಬೋಹೈಡ್ರೇಟ್ ಇದ್ದು, ಇದು ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.
ಆದರೆ
ಹೆಚ್ಚು ಪ್ರಮಾಣದಲ್ಲಿ ಅನ್ನ ತಿಂದರೆ ಮಾತ್ರ ತೂಕ ಹೆಚ್ಚಾಗುತ್ತದೆ.
ಸರಿಯಾದ ಪ್ರಮಾಣದಲ್ಲಿ ತಿಂದರೆ ಯಾವುದೇ ಸಮಸ್ಯೆ ಇರುವುದಿಲ್ಲ.
👉 ಇಲ್ಲ, ಅನ್ನ ಸಂಪೂರ್ಣ ಬಿಡ್ಬೇಡಿ!
ಅನ್ನವನ್ನು ಸಂಪೂರ್ಣವಾಗಿ ಬಿಡೋದರಿಂದ ದೇಹಕ್ಕೆ ಬೇಕಾದ ಶಕ್ತಿ ಕಡಿಮೆಯಾಗಬಹುದು. ಇದರಿಂದ ದೌರ್ಬಲ್ಯ, ತಲೆಸುತ್ತು ಮತ್ತು ದೇಹದ ಶಕ್ತಿ ಕುಗ್ಗುವ ಸಾಧ್ಯತೆ ಇದೆ. ಆದರೆ ತಿನ್ನುವ ಪ್ರಮಾಣವನ್ನು ಕಡಿಮೆ ಮಾಡಿ ಸರಿಯಾದ balanced diet ಅನುಸರಿಸಿ.
ಸರಿಯಾದ ವಿಧಾನ:
ಊಟದ ತಟ್ಟೆಯಲ್ಲಿ ಅರ್ಧದಷ್ಟು ಅನ್ನ ತುಂಬಿಸಿಕೊಳ್ಳುವ ಬದಲು, ಕೇವಲ ಒಂದು ಸಣ್ಣ ಬೌಲ್ ಅನ್ನ ಮಾತ್ರ ಬಳಸಿ, ಹೆಚ್ಚು ಬೇಯಿಸಿದ ತರಕಾರಿ ಹಾಗೂ ಪ್ರೋಟೀನ್ ಸೇರಿಸಿಕೊಳ್ಳಿ.
ಉದಾ:50% ತರಕಾರಿಗಳು ಮತ್ತು ಸಲಾಡ್,
25% ಪ್ರೋಟೀನ್ (ಬೇಳೆಕಾಳು, ಮೊಟ್ಟೆ ಅಥವಾ ಚಿಕನ್) 25% ಅನ್ನ.
ಜನರು ಮಾಡುವ ಸಾಮಾನ್ಯ ತಪ್ಪುಗಳು
• ಅನ್ನ ಸಂಪೂರ್ಣವಾಗಿ ಬಿಡುವುದು.
• ರಾತ್ರಿ ಹೆಚ್ಚು ಅನ್ನ ತಿನ್ನುವುದು.
• ಅನ್ನ ಬಿಟ್ಟು junk food ತಿನ್ನುವುದು.
• ಇವು weight loss slow ಮಾಡುತ್ತವೆ.
ಅನ್ನಕ್ಕೆ ಪರ್ಯಾಯ ಆಹಾರಗಳು
ಅನ್ನವನ್ನು ಕಡಿಮೆ ಮಾಡಿ ಈ ಆಹಾರಗಳನ್ನು ಸೇರಿಸಬಹುದು:
✔ ರಾಗಿ ಮುದ್ದೆ, ಸಿರಿಧಾನ್ಯಗಳ Millet
✔ ಚಪಾತಿ,ಬ್ರೌನ್ ರೈಸ್,ಕೆಂಪು ಅಕ್ಕಿ
✔ ತರಕಾರಿ ಆಹಾರಗಳು
👉 ತೂಕ ಇಳಿಕೆಗೆ ರಾಗಿ ಮುದ್ದೆ ಹೇಗೆ ಸಹಾಯ ಮಾಡುತ್ತದೆ ತಿಳಿಯಲು ನಮ್ಮ ಲೇಖನವನ್ನು ಓದಿ.
https://www.aarogyawithanitha.com/2026/04/ragi-mudde-weight-loss-kannada.html
ಸಾಮಾನ್ಯ ಪ್ರಶ್ನೆಗಳು❓
1. ಅನ್ನ ತಿನ್ನುತ್ತಾ ತೂಕ ಇಳಿಸಬಹುದಾ?
ಉತ್ತರ: ಹೌದು, ಸರಿಯಾದ ಪ್ರಮಾಣದಲ್ಲಿ ತಿಂದರೆ ತೂಕ ಇಳಿಸಬಹುದು
2.ದಿನಕ್ಕೆ ಎಷ್ಟು ಅನ್ನ ತಿನ್ನಬೇಕು?
ಉತ್ತರ:ಸುಮಾರು 1 ಕಪ್ ಸಾಕು
3. ರಾತ್ರಿ ಅನ್ನ ತಿನ್ನಬಹುದಾ?
ಉತ್ತರ:ಕಡಿಮೆ ಪ್ರಮಾಣದಲ್ಲಿ ತಿನ್ನಬಹುದು, ಆದರೆ ತಪ್ಪಿಸಿದ್ರೆ ಉತ್ತಮ.
ಅನುಭವದ ಮಾತು
ತೂಕ ಇಳಿಸುವುದು ಎಂದರೆ ನಮ್ಮ ಪ್ರಿಯವಾದ ಆಹಾರವನ್ನು ತ್ಯಜಿಸುವುದು ಎಂದಲ್ಲ. ಅನ್ನ ನಮ್ಮ ಊಟದ ಒಂದು ಭಾಗ. ಅದನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ತರಕಾರಿಗಳೊಂದಿಗೆ ಸೇವಿಸುವುದರಿಂದ ತೂಕ ಖಂಡಿತವಾಗಿಯೂ ಇಳಿಕೆಯಾಗುತ್ತದೆ. ಹಾಗೂ ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮತ್ತು ನಡಿಗೆ ತುಂಬಾ ಮುಖ್ಯ.
Comments
Post a Comment