ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಒಳ್ಳೆಯದೇ?
Morning Coffee Habit: ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದಾ?
ಬೆಳಿಗ್ಗೆ ಎದ್ದ ತಕ್ಷಣ ಹಲವರಿಗೆ ಮೊದಲು ನೆನಪಾಗುವುದು ಒಂದು ಬಿಸಿ ಬಿಸಿ ಕಾಫಿ. ಕೆಲವರಿಗೆ ಕಾಫಿ ಕುಡಿಯದೇ ದಿನವೇ ಶುರುವಾಗುವುದಿಲ್ಲ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದೇ ಎಂಬ ಪ್ರಶ್ನೆ ಈಗ ಹೆಚ್ಚು ಜನರಲ್ಲಿ ಕೇಳಿಬರುತ್ತಿದೆ.
ವೈಜ್ಞಾನಿಕವಾಗಿ ನೋಡಿದರೆ, ಬೆಳಿಗ್ಗೆ ನಮ್ಮ ದೇಹದಲ್ಲಿ ಸಹಜವಾಗಿಯೇ ಕಾರ್ಟಿಸೋಲ್ (Cortisol) ಎಂಬ stress hormone ಹೆಚ್ಚು ಇರುತ್ತದೆ. ಇದೇ ದೇಹವನ್ನು naturally active ಆಗಿರಲು ಸಹಾಯ ಮಾಡುತ್ತದೆ. ಆ ಸಮಯದಲ್ಲೇ ಹೆಚ್ಚು ಕಾಫಿ ಕುಡಿಯುವುದರಿಂದ ಕೆಲವರಿಗೆ restlessness ಅಥವಾ ಹೃದಯ ಬಡಿತ ಹೆಚ್ಚಾಗುವ ಅನುಭವವೂ ಆಗಬಹುದು.
ಕಾಫಿಯಲ್ಲಿ ಇರುವ ಕ್ಯಾಫಿನ್ (Caffeine) ದೇಹಕ್ಕೆ ತಕ್ಷಣ ಚುರುಕುತನ ನೀಡುತ್ತದೆ. ಅದರಿಂದ ನಿದ್ರೆ ಕಡಿಮೆಯಾಗುತ್ತದೆ ಮತ್ತು ಮನಸ್ಸು fresh ಆಗಿರುವಂತೆ ಅನುಭವವಾಗಬಹುದು. ಆದರೆ ಬೆಳಿಗ್ಗೆ ಹೊಟ್ಟೆ ಖಾಲಿ ಇರುವಾಗ ಕಾಫಿ ಕುಡಿದರೆ ದೇಹದಲ್ಲಿ ಆಸಿಡ್ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಕೆಲವರಿಗೆ ಹೊಟ್ಟೆ ಉರಿಯುವುದು, ಗ್ಯಾಸ್ಟ್ರಿಕ್ ಅಥವಾ ಅಜೀರ್ಣ ಸಮಸ್ಯೆ ಕಾಣಿಸಬಹುದು.
ವೈಜ್ಞಾನಿಕವಾಗಿ ನೋಡಿದರೆ, ಬೆಳಿಗ್ಗೆ ನಮ್ಮ ದೇಹದಲ್ಲಿ ಸಹಜವಾಗಿಯೇ ಕಾರ್ಟಿಸೋಲ್ (Cortisol) ಎಂಬ stress hormone ಹೆಚ್ಚು ಇರುತ್ತದೆ. ಇದೇ ದೇಹವನ್ನು naturally active ಆಗಿರಲು ಸಹಾಯ ಮಾಡುತ್ತದೆ. ಆ ಸಮಯದಲ್ಲೇ ಹೆಚ್ಚು ಕಾಫಿ ಕುಡಿಯುವುದರಿಂದ ಕೆಲವರಿಗೆ restlessness ಅಥವಾ ಹೃದಯ ಬಡಿತ ಹೆಚ್ಚಾಗುವ ಅನುಭವವೂ ಆಗಬಹುದು.
ಆದರೆ ಕಾಫಿ ಸಂಪೂರ್ಣ ಕೆಟ್ಟದ್ದು ಅಂತ ಹೇಳಲು ಆಗುವುದಿಲ್ಲ. ಸರಿಯಾದ ಪ್ರಮಾಣದಲ್ಲಿ ಕುಡಿಯುವುದರಿಂದ concentration improve ಆಗಬಹುದು ಮತ್ತು ದಣಿವು ಕಡಿಮೆಯಾಗಬಹುದು. ಮುಖ್ಯವಾಗಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದಕ್ಕಿಂತ ಮೊದಲು ನೀರು ಅಥವಾ light food ತೆಗೆದುಕೊಳ್ಳುವುದು ಉತ್ತಮ ಎಂದು health experts ಹೇಳುತ್ತಾರೆ.
ನನ್ನ ಮತ್ತೊಂದು ಲೇಖನದಲ್ಲಿ "ಸೋರೆಕಾಯಿಯ ಮಹತ್ವದ" ಬಗ್ಗೆ ತಿಳಿಸಲಾಗಿದೆ ಅದನ್ನು ಸಹ ಓದಿ.👇
https://www.aarogyawithanitha.com/2026/05/sorekayi-juice-benefits%20bottle-gourd-benefits-kannada.html
ದೇಹದ ಪ್ರತಿಕ್ರಿಯೆ ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಆಗಿರುತ್ತದೆ. ಕೆಲವರಿಗೆ ಯಾವುದೇ ಸಮಸ್ಯೆ ಆಗದೇ ಇರಬಹುದು, ಆದರೆ acidity ಅಥವಾ gastritis ಇರುವವರು ಜಾಗ್ರತೆ ವಹಿಸುವುದು ಒಳ್ಳೆಯದು. ಆರೋಗ್ಯಕರ ಅಭ್ಯಾಸದ ಜೊತೆಗೆ ಮಿತಿಯಲ್ಲಿ ಕಾಫಿ ಕುಡಿಯುವುದೇ ಉತ್ತಮ ಆಯ್ಕೆ.
Comments
Post a Comment