ಮೊಟ್ಟೆಯಲ್ಲಿ ನಿಜವಾದ ಶಕ್ತಿ ಯಾವ ಭಾಗದಲ್ಲಿದೆ?
ನೀವು ಪ್ರತಿದಿನ ಮೊಟ್ಟೆ ತಿನ್ನ್ತೀರಾ? ಹಾಗಿದ್ರೆ ಈ ಸತ್ಯ ಗೊತ್ತಿರಬೇಕು!
ಬಹಳ ಜನ ಮೊಟ್ಟೆ ತಿನ್ನುವಾಗ ಹಳದಿ ಭಾಗವನ್ನು ತೆಗೆದು ಬಿಳಿ ಭಾಗ ಮಾತ್ರ ತಿನ್ನುತ್ತಾರೆ. ಕೆಲವರು “ಹಳದಿ ಭಾಗ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ” ಎಂದು ಭಯಪಡುತ್ತಾರೆ. ಆದರೆ ನಿಜವಾಗಿ ನೋಡಿದರೆ ಮೊಟ್ಟೆಯ ಎರಡೂ ಭಾಗದಲ್ಲೂ ದೇಹಕ್ಕೆ ಬೇಕಾದ ಪೋಷಕಾಂಶಗಳಿವೆ.
ಮೊಟ್ಟೆಯ ಬಿಳಿ ಭಾಗದಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ. ಅದರಿಂದ ಜಿಮ್ ಮಾಡುವವರು, ತೂಕ ಕಡಿಮೆ ಮಾಡಿಕೊಳ್ಳುವವರು ಮತ್ತು fitness ಕಡೆ ಗಮನ ಕೊಡುವವರು ಬಿಳಿ ಭಾಗವನ್ನು ಹೆಚ್ಚು ಇಷ್ಟಪಡುತ್ತಾರೆ. ಬೆಳಿಗ್ಗೆ ಬೇಯಿಸಿದ ಮೊಟ್ಟೆಯ ಬಿಳಿ ಭಾಗ ತಿಂದರೆ ಹೊಟ್ಟೆ ತುಂಬಿದಂತಾಗುತ್ತದೆ ಮತ್ತು ಬೇಗ ಹಸಿವು ಕೂಡ ಆಗುವುದಿಲ್ಲ. ದೇಹದ ಸ್ನಾಯುಗಳಿಗೆ ಸಹ ಇದು ಒಳ್ಳೆಯದು.
ಇನ್ನೊಂದು ಕಡೆ ಮೊಟ್ಟೆಯ ಹಳದಿ ಭಾಗವನ್ನು ಹಲವರು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಹಳದಿ ಭಾಗದಲ್ಲಿ ವಿಟಮಿನ್ A, D, B12 ಮತ್ತು ಉತ್ತಮ ಕೊಬ್ಬುಗಳಿರುತ್ತವೆ. ಮಕ್ಕಳ ಬೆಳವಣಿಗೆಗೆ ಮತ್ತು ದೇಹದ ಶಕ್ತಿಗೆ ಇದು ಸಹಕಾರಿ. ವಿಶೇಷವಾಗಿ ಕಣ್ಣು ಮತ್ತು ಮೆದುಳಿನ ಆರೋಗ್ಯಕ್ಕೆ ಹಳದಿ ಭಾಗದಲ್ಲಿರುವ ಪೋಷಕಾಂಶಗಳು ಉಪಯುಕ್ತವಾಗುತ್ತವೆ.
ಕೆಲವರು diet ಮಾಡುವಾಗ ಸಂಪೂರ್ಣ ಹಳದಿ ಭಾಗ avoid ಮಾಡುತ್ತಾರೆ. ಆದರೆ ಆರೋಗ್ಯಕರ ವ್ಯಕ್ತಿಗಳು ಮಿತಿಯಲ್ಲಿ ಪೂರ್ಣ ಮೊಟ್ಟೆ ತಿನ್ನುವುದರಿಂದ ಸಾಮಾನ್ಯವಾಗಿ ಸಮಸ್ಯೆ ಆಗುವುದಿಲ್ಲ. ದಿನಕ್ಕೆ 1 ಅಥವಾ 2 ಮೊಟ್ಟೆ ತಿನ್ನುವುದು ಹಲವರಿಗೆ safe ಅನ್ನೋದು nutrition experts ಹೇಳುವ ಮಾತು.
ನಿಜ ಹೇಳಬೇಕು ಅಂದ್ರೆ “ಯಾವುದು ಉತ್ತಮ?” ಅನ್ನೋದಕ್ಕಿಂತ “ನಿಮ್ಮ ದೇಹಕ್ಕೆ ಯಾವುದು ಬೇಕು?” ಅನ್ನೋದು ಮುಖ್ಯ. ತೂಕ ಕಡಿಮೆ ಮಾಡಿಕೊಳ್ಳುವವರು ಬಿಳಿ ಭಾಗ ಹೆಚ್ಚು ತೆಗೆದುಕೊಳ್ಳಬಹುದು. ಆದರೆ ಸಂಪೂರ್ಣ ಪೋಷಕಾಂಶ ಬೇಕಾದರೆ ಪೂರ್ಣ ಮೊಟ್ಟೆ ತಿನ್ನುವುದು ಉತ್ತಮ ಆಯ್ಕೆ.
ಕೊನೆಯ ಸಲಹೆ
ಮೊಟ್ಟೆಯ ಬಿಳಿ ಭಾಗ ಮತ್ತು ಹಳದಿ ಭಾಗ ಎರಡಕ್ಕೂ ತಮ್ಮದೇ ಆದ ಲಾಭಗಳಿವೆ. ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮೊಟ್ಟೆ ಆರೋಗ್ಯಕರ ಆಹಾರವಾಗಿರುತ್ತದೆ.
ನನ್ನ ಮತ್ತೊಂದು ಲೇಖನದಲ್ಲಿ ಬಿಪಿ ಅಥವಾ ರಕ್ತದೊತ್ತಡವನ್ನು ಕಡಿಮೆ ಮಾಡುವ ವಿಧಾನಗಳನ್ನು ತಿಳಿಸಲಾಗಿದೆ. ನಿಮಗೆ ಉಪಯುಕ್ತವಾದಲ್ಲಿ, ಅದನ್ನು ಸಹ ಓದಿ ನಿಮ್ಮ ಸ್ನೇಹಿತರೊಡನೆ ಮಾಹಿತಿ ಹಂಚಿಕೊಳ್ಳಿ.
Comments
Post a Comment