ಸೋರೆಕಾಯಿಯ ಮಹತ್ವ ನಿಮಗೆ ಗೊತ್ತೇ?

ದಿನವೂ ತಿನ್ನುವ ಈ ತರಕಾರಿಯಲ್ಲೇ ಇಷ್ಟು ಆರೋಗ್ಯ ರಹಸ್ಯ ಇದೆಯಾ?

ನಮ್ಮ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲಿ ಸೋರೆಕಾಯಿ ಕೂಡ ಒಂದು. ಹಲವರು ಇದನ್ನು ಸಾದಾ ತರಕಾರಿ ಅಂದುಕೊಳ್ಳುತ್ತಾರೆ, ಆದರೆ ದೇಹಕ್ಕೆ ಇದು ತುಂಬಾ ಆರೋಗ್ಯಕರ ಆಹಾರ  ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಸೋರೆಕಾಯಿ ತಿನ್ನುವುದರಿಂದ ದೇಹ ತಂಪಾಗಿರಲು ಸಹಾಯವಾಗುತ್ತದೆ.

ಸೋರೆಕಾಯಿಯಲ್ಲಿ ವಿಟಮಿನ್, ಫೈಬರ್ ಮತ್ತು ದೇಹಕ್ಕೆ ಬೇಕಾದ ಪೋಷಕಾಂಶಗಳಿವೆ. ಇದು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯ ಆರೋಗ್ಯಕ್ಕೂ ಇದು ಲಾಭಕರ ಎಂದು ಹಲವರು ನಂಬುತ್ತಾರೆ.

ತೂಕ ಕಡಿಮೆ ಮಾಡಿಕೊಳ್ಳುವವರು ಕೂಡ ಸೋರೆಕಾಯಿಯನ್ನು ಆಹಾರದಲ್ಲಿ ಸೇರಿಸಬಹುದು. ಇದರಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಅದರಿಂದ ಅನಗತ್ಯ ತಿಂಡಿ ತಿನ್ನುವ ಅಭ್ಯಾಸ ಕಡಿಮೆಯಾಗಬಹುದು. ಆರೋಗ್ಯಕರ diet follow ಮಾಡುವವರಿಗೆ ಇದು ಒಳ್ಳೆಯ ಆಯ್ಕೆ.

ಸೋರೆಕಾಯಿಯಲ್ಲಿ ನೀರಿನ ಅಂಶ ಹೆಚ್ಚು
ಇರುವುದರಿಂದ ದೇಹ ಹೈಡ್ರೇಟ್ ಆಗಿರಲು ಸಹಕಾರಿ. ದೇಹದ ಉಷ್ಣತೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಹಲವರು juice ಅಥವಾ curry ರೂಪದಲ್ಲಿ ಬಳಸುತ್ತಾರೆ. ಹಗುರವಾದ ಆಹಾರವಾಗಿರುವುದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು.

ಇಂದಿನ fast food ಜೀವನ ಶೈಲಿಯಲ್ಲಿ ಇಂತಹ ಸರಳ ತರಕಾರಿಗಳನ್ನು ಮರೆಯಬಾರದು. ಮನೆಯಲ್ಲೇ ಸುಲಭವಾಗಿ ಸಿಗುವ ಸೋರೆಕಾಯಿ ಆರೋಗ್ಯ ಕಾಪಾಡಲು ಸಹಕಾರಿ ಆಹಾರವಾಗಿದೆ. ನನ್ನ ಸ್ನೇಹಿತರು ಸಹ ಕೆಲವು ಜನ ಇದನ್ನು ಉಪಯೋಗಿಸಿ ಹಲವಾರು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. 

ನನ್ನ ಮತ್ತೊಂದು ಲೇಖನದಲ್ಲಿ ಮೊಟ್ಟೆಯ ಯಾವ ಭಾಗ ದೇಹಕ್ಕೆ ಉತ್ತಮ? ಎಂದು ತಿಳಿಸಲಾಗಿದೆ. ಅದನ್ನು ಸಹ ಓದಿ.👇

https://www.aarogyawithanitha.com/2026/05/motte-bili-bhaga-vs-haladi-bhaga.html

ಸೋರೆಕಾಯಿ ಸಾಮಾನ್ಯ ತರಕಾರಿ ಆದರೂ ದೇಹಕ್ಕೆ ಹಲವು ರೀತಿಯಲ್ಲಿ ಲಾಭ ಕೊಡುತ್ತದೆ. ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಂಡರೆ ಆರೋಗ್ಯಕರ ಜೀವನ ಶೈಲಿಗೆ ಸಹಾಯವಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನನ್ನ ವೆಬ್ಸೈಟ್ ಅನ್ನು ಫಾಲೋ ಮಾಡಿ. ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ.

Comments

Popular posts from this blog

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ತೂಕ ಇಳಿಕೆಯ ಆರೋಗ್ಯಕರ ಪಾನೀಯಗಳು – ಮನೆಯಲ್ಲೇ ಮಾಡುವ ಸರಳ ಡ್ರಿಂಕ್ಸ್.👇👇