ತಾಯಿಹಾಲು ನೀಡುತ್ತಾ ತೂಕ ಇಳಿಸೋ ಆರೋಗ್ಯಕರ ಆಹಾರ ಪಟ್ಟಿ:

ತಾಯಿಗೂ ಆರೋಗ್ಯ, ಮಗುವಿಗೂ ಪೌಷ್ಟಿಕತೆ. 

ಹಾಲು ಉತ್ಪಾದನೆ ಕಾಪಾಡಿಕೊಂಡು ದೇಹದ ಕೊಬ್ಬನ್ನು ನಿಧಾನವಾಗಿ ಕಡಿಮೆ ಮಾಡುವ ಪೌಷ್ಟಿಕ ಆಹಾರ ಮಾರ್ಗದರ್ಶಿ. 

ಪರಿಚಯ: 

ಪ್ರಸವದ ನಂತರ ಮಹಿಳೆಯ ದೇಹದಲ್ಲಿ ಹಲವಾರು ಹಾರ್ಮೋನ್ ಬದಲಾವಣೆಗಳು ಸಂಭವಿಸುತ್ತವೆ. ಈ ಸಮಯದಲ್ಲಿ ತೂಕ ಹೆಚ್ಚಳ ಸಾಮಾನ್ಯವಾದದ್ದೇ. ಆದರೆ ತಾಯಿಹಾಲು ನೀಡುತ್ತಿರುವ ತಾಯಿಯರು ತಕ್ಷಣ ಕಠಿಣ ಡಯಟ್ ಅಥವಾ ಉಪವಾಸಕ್ಕೆ ಹೋಗುವುದು ಸರಿಯಲ್ಲ. ಹಾಲು ಉತ್ಪಾದನೆಗೆ ಬೇಕಾದ ಪೌಷ್ಟಿಕಾಂಶಗಳನ್ನು ಕಾಪಾಡಿಕೊಂಡು ದೇಹದ ಹೆಚ್ಚುವರಿ ಕೊಬ್ಬನ್ನು ನಿಧಾನವಾಗಿ ಕಡಿಮೆ ಮಾಡುವುದು ಅತ್ಯಂತ ಸುರಕ್ಷಿತ ವಿಧಾನ. ಸಮತೋಲನ ಆಹಾರ, ಪ್ರೋಟೀನ್ ಸಮೃದ್ಧ ಪದಾರ್ಥಗಳು, ಹಸಿರು ತರಕಾರಿಗಳು ಮತ್ತು ಸಾಕಷ್ಟು ನೀರು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಹಾಗೂ ತೂಕ ಸಹಜವಾಗಿ ನಿಯಂತ್ರಣಕ್ಕೆ ಬರುತ್ತದೆ. ಸರಿಯಾದ ಆಹಾರ ಕ್ರಮವು ತಾಯಿಯ ಆರೋಗ್ಯವನ್ನೇ ಮಾತ್ರವಲ್ಲ, ಮಗುವಿನ ಬೆಳವಣಿಗೆಯನ್ನೂ ಬೆಂಬಲಿಸುತ್ತದೆ.
ಈ ಲೇಖನದಲ್ಲಿ ತಾಯಿಹಾಲು ನೀಡುತ್ತಾ ಸುರಕ್ಷಿತವಾಗಿ ತೂಕ ಇಳಿಸಲು ಸಹಾಯಕವಾಗುವ ಪೌಷ್ಟಿಕ ಆಹಾರ ಪಟ್ಟಿ ಮತ್ತು ಸರಳ ಜೀವನಶೈಲಿ ಸಲಹೆಗಳನ್ನು ತಿಳಿದುಕೊಳ್ಳೋಣ.

ಫೈಬರ್ ಹೆಚ್ಚಿರುವ ಆಹಾರ ಗಳನ್ನು ಸೇವಿಸುವುದರಿಂದ ಬಾಣಂತಿಯರ ತೂಕ ಸಹ ಇಳಿಕೆಯಾಗುತ್ತದೆ. ಮಗುವಿಗೂ ಸಹ ಪೌಷ್ಟಿಕ ಆಹಾರ ಎದೆಹಾಲಿನಮೂಲಕನೀಡಿದಂತಾಗುತ್ತದೆ.

ತರಕಾರಿಗಳು,ಹಸಿರು ಸೊಪ್ಪು, ಓಟ್ಸ್, ಹಣ್ಣುಗಳು, ಕಿಚಡಿ, ಮೊಟ್ಟೆ, ಗಂಜಿ ಅಂತಹ ಸೂಪ್ಗಳನ್ನು ತೆಗೆದುಕೊಳ್ಳುವುದರಿಂದ
ಫೈಬರ್ ಜೀರ್ಣಕ್ರಿಯೆ ಸುಧಾರಿಸಿ ತೂಕ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ. ಅಷ್ಟೆಲ್ಲದೇ ಇವುಗಳ ಜೊತೆಗೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ,ಜೀರಿಗೆ ನೀರು ಇವುಗಳನ್ನು ದಿನನಿತ್ಯ ಸೇವಿಸುತ್ತಾ ಬಂದರೆ ಕೊಬ್ಬಿನ ಜಮಾವಣೆ ಆಗುವುದಿಲ್ಲ. ಸರಿಯಾದ ಸಮಯಕ್ಕೆ ಊಟ ಮಾಡುವುದು ಸಹ ತೂಕ ಇಳಿಕೆಯ ಒಂದು ಕ್ರಮ. ಒಂದು ಸರಿಯಾದ ಸಮಯವನ್ನು ನಿಗದಿಪಡಿಸಿ ಅದರ ಅನುಸಾರ ದಿನನಿತ್ಯ ಊಟವನ್ನು ಬಾಣಂತಿಯರು ಸೇವಿಸಬೇಕು.

ಆಹಾರ ಜೊತೆ ಅಭ್ಯಾಸವೂ ಮುಖ್ಯ.

20 ನಿಮಿಷ ವಾಕಿಂಗ್ ಮಾಡುವುದು ಲಘು ಯೋಗ ಮಾಡುವುದು ಅಗತ್ಯ ಸಾಕಷ್ಟು ನಿದ್ರೆ ವಹಿಸುವುದು ದಿನಕ್ಕೆ ಎರಡು ಮೂರು ಲೀಟರ್ ನೀರು ಕುಡಿಯುವುದು ಇವುಗಳನ್ನು ಬಾಣಂತನದ ಸಮಯದಲ್ಲಿ ಬಾಣಂತಿಯರು ಅಳವಡಿಸಕೊಳ್ಳಬೇಕಾಗಿದ್ದು ಬಹು ಮುಖ್ಯ,

ತಪ್ಪಿಸಬೇಕಾದ ಆಹಾರಗಳು:

ಹೆಚ್ಚು ಸಕ್ಕರೆ,ಜಂಕ್ ಫುಡ್, ಗಾಢ ಎಣ್ಣೆ ಪದಾರ್ಥಗಳು
ಸಿಹಿ ಪಾನೀಯಗಳು,ಇವು ತೂಕ ಇಳಿಕೆಗೆ ಅಡ್ಡಿಯಾಗುತ್ತವೆ. ಆದಷ್ಟು ಇವುಗಳನ್ನು ತಪ್ಪಿಸುವುದು ಒಳ್ಳೆಯದು.

ಅನುಭವದ ಮಾತು

ಬಾಣಂತಿಯರು ಸಾಕಷ್ಟು ಹೆರಿಗೆಯ ನೋವು ಮತ್ತು ಆಯಾಸವನ್ನು ಅನುಭವಿಸುತ್ತಿರುತ್ತಾರೆ. ಮನೆಯಲ್ಲಿರುವವರು ಅವರಿಗೆ ಅದನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕರಾಗಬೇಕು, ಉದಾಹರಣೆಗೆ: ಮಗುವನ್ನು ಸಂತೈಸುವುದು, ಮಗುವಿನ ಜೊತೆ ಆಟವಾಡುವುದು, ಬಾಣಂತಿಯರ ನೋವಿಗೆ ಸ್ಪಂದಿಸುವುದು ಮುಂತಾದವು,

ಜಾಗ್ರತೆ

ತಾಯಿಹಾಲು ನೀಡುತ್ತಿರುವವರು ತಕ್ಷಣ ಕಠಿಣ ಡಯಟ್ ಮಾಡಬಾರದು.
ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಅಗತ್ಯ.
ವಿಶ್ವ ಆರೋಗ್ಯ ಸಂಸ್ಥೆಯಾದ World Health Organization ಕೂಡ ಪ್ರಸವ ನಂತರ ಸಮತೋಲನ ಆಹಾರ ಮತ್ತು ನಿದ್ರೆ ಮಹತ್ವವನ್ನು ಒತ್ತಿ ಹೇಳುತ್ತದೆ.



“ತೂಕ ಇಳಿಕೆಗೆ ಸಹಾಯಕ 7 ಪ್ರಮುಖ ಆಹಾರಗಳು”

ಅಥವಾ

 “ಬೆಳಿಗ್ಗೆಯಿಂದ ರಾತ್ರಿ ತನಕ ಡಯಟ್ ಪ್ಲಾನ್  ಪ್ರಸವದ ನಂತರದ ತೂಕ ಇಳಿಕೆಗೆ ಆಹಾರ ಕುರಿತು ನಮ್ಮ ಮತ್ತೊಂದು ಲೇಖನ ಓದಿ.ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.



Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery