ಮಕ್ಕಳ ಬೆಳವಣಿಗೆಗೆ ಸೂಕ್ತ ಬೆಳಗಿನ ಊಟ | Healthy Breakfast for Kids:

ಮಕ್ಕಳಿಗೆ ಪೋಷಕತೆಯ ಬೆಳಗಿನ ಊಟ


ಮಕ್ಕಳ ಬೆಳವಣಿಗೆಯಲ್ಲಿ ಬೆಳಗಿನ ಬ್ರೇಕ್ ಫಾಸ್ಟ್ ತುಂಬಾನೇ ಮುಖ್ಯ.

ಆಧುನಿಕ ತಾಯಂದಿರು ಮಕ್ಕಳು ಊಟ ಮಾಡದೇ ಇರುವುದನ್ನು ನೋಡಿ ಬಹಳಷ್ಟು,ವ್ಯಥೆಪಡುತ್ತಿರುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಅಮ್ಮಂದಿರಿಗೆ ಕಾಡುವ ಪ್ರಶ್ನೆ ಮಕ್ಕಳಿಗೆ ಬ್ರೇಕ್ಫಾಸ್ಟ್ ಏನು ಮಾಡಲಿ.? ಮಗು ಏನನ್ನು ತಿನ್ನುವುದು? ಎಂದು. ಇದಕ್ಕೆ ನಾನು ಒಂದು ಪರಿಹಾರವನ್ನು ನೀಡುತ್ತೇನೆ ಬನ್ನಿ.

ಮಕ್ಕಳ ಬೆಳವಣಿಗೆಗೆ ಬೆಳಗಿನ ಊಟದ ಪ್ರಾಮುಖ್ಯತೆ 

ಮಕ್ಕಳಿಗೆ ಬೆಳಗಿನ ತಿಂಡಿ ತುಂಬಾನೇ ಮುಖ್ಯ. ಏಕೆಂದರೆ ಮಗುವಿನ ಬೆಳವಣಿಗೆಗೆ ಹಾಗೂ ಮಗು ದಿನವಿಡೀ ಆಟವಾಡಲು, ದಿನವಿಡೀ ಎನರ್ಜಿಟಿಕ್ ಆಗಿರಲು, ನೆನಪಿನ ಶಕ್ತಿ ಚೆನ್ನಾಗಿರಲು, ದೈಹಿಕ ಬೆಳವಣಿಗೆ ಸರಿಯಾಗಿ ಆಗಲು ಇವೆಲ್ಲದಕ್ಕೂ ಮುಖ್ಯ ಬೆಳಗಿನ ಬ್ರೇಕ್ ಫಾಸ್ಟ್.

 ಮಕ್ಕಳಿಗೆ ಆರೋಗ್ಯಕರ ಬ್ರೇಕ್ ಫಾಸ್ಟ್ ರೆಸಿಪಿ. 

ಮಕ್ಕಳ ಬೆಳವಣಿಗೆ, ಮೆದುಳಿನ ಬೆಳವಣಿಗೆ ಮತ್ತು ಶಕ್ತಿ ತುಂಬಲು ಬೆಳಗಿನ ಉಪಹಾರ ತುಂಬಾನೇ ಮುಖ್ಯ.ಆರೋಗ್ಯಕರ ಬ್ರೇಕ್‌ಫಾಸ್ಟ್ ಮಕ್ಕಳಿಗೆ ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್ ಗಳಿಂದ ಕೂಡಿರಬೇಕು.

1)ಓಟ್ಸ್ ಮತ್ತು ಹಣ್ಣನ್ನು ಮಿಶ್ರಣ ಮಾಡಿಕೊಡಿ.

ಪದಾರ್ಥಗಳು:

½ cup rolled oats
ಹಾಲು / badam milk
ಕತ್ತರಿಸಿದ ಬಾಳೆಹಣ್ಣು / ಸೇಬು / ಸ್ಟ್ರಾಬೆರ್ರಿ

ಪ್ರಯೋಜನ:

ಓಟ್ಸ್ ಫೈಬರ್ ಮತ್ತು ಹಸಿವಿನ ನಿಯಂತ್ರಣ, ಹಣ್ಣುಗಳು ವಿಟಮಿನ್ ಮತ್ತು ಖನಿಜಗಳನ್ನು ನೀಡುತ್ತವೆ.

2) ಬಣ್ಣ ಬಣ್ಣಗಳಿಂದ ಕೂಡಿದ ಬ್ರೇಕ್ ಫಾಸ್ಟ್

ಪದಾರ್ಥಗಳು:

ದೋಸೆ ಹಿಟ್ಟು/ಬೀಟ್ರೂಟ್ ರಸ/ಕ್ಯಾರೆಟ್ ರಸ/ಪಾಲಕ್ ಸೊಪ್ಪಿನ ರಸ ಇದನ್ನು ಮಾಡುವುದು ಹೇಗೆ ಎಂದರೆ ಸಣ್ಣ ಸಣ್ಣ ಕಪ್ ಗಳಲ್ಲಿ ದೋಸೆ ಹಿಟ್ಟನ್ನು ಹಾಕಿಕೊಳ್ಳಿ ಅದಕ್ಕೆ ಒಂದು ಕಪ್ ನಲ್ಲಿ ಬೀಟ್ರೂಟ್ ರಸ ಸೇರಿಸಿ ಮತ್ತೊಂದು ಕಪ್ ಗೆ ಕ್ಯಾರೆಟ್ ರಸ ಮತ್ತೊಂದು ಕಪ್ ಗೆ ಪಾಲಕ್ ಸೊಪ್ಪಿನ ರಸ ಹೀಗೆ ಚೆನ್ನಾಗಿ ಮಿಶ್ರಣ ಮಾಡಿದ ರಸವನ್ನು ಬಣ್ಣ ಬಣ್ಣದ ದೋಸೆಯ ರೀತಿ ತಿನ್ನಲು ಕೊಡಿ. 

ಪ್ರಯೋಜನ:

ಹಗುರವಾಗಿರುತ್ತದೆ ಜೀರ್ಣಿಸಿಕೊಳ್ಳಲು ಸುಲಭ, ಪ್ರೋಟೀನ್ ಮತ್ತು ಫೈಬರ್ನಿಂದ ಕೂಡಿದೆ.

3) ಅವಲಕ್ಕಿಅಥವಾ ಉಪ್ಪಿಟ್ಟು

ಪದಾರ್ಥಗಳು:

ಕಡಿಮೆ ಎಣ್ಣೆ + ತರಕಾರಿಗಳಿಂದ ಕೂಡಿಯಿರಲಿ
ಉಪ್ಪು ಕಡಿಮೆ, ಲಿಂಬು ರಸ, ಸಾಸಿವೆ 

ಪ್ರಯೋಜನ:

Digestion ಸುಲಭ, ಕಡಿಮೆ ಎಣ್ಣೆ, ಕಾರ್ಬೋಹೈಡ್ರೇಟ್ ಸಮತೋಲನದಲ್ಲಿರಲು ಸಹಾಯಮಾಡುತ್ತದೆ

4)ತಾಜಾ ಹಣ್ಣುಗಳ ರಸ

ಪದಾರ್ಥಗಳು:

ಹಣ್ಣು (ಬಾಳೆಹಣ್ಣು / ಸ್ಟ್ರಾಬೆರ್ರಿ)
1 tsp ಫ್ಲಾಕ್ಸೀಡ್ / ಚಿಯಾ ಬೀಜ           

 ಪ್ರಯೋಜನ:

ಎನರ್ಜಿ, ಓಮೆಗಾ-3, ಪ್ರೋಟೀನ್, ಹೃದಯಕ್ಕೆ ಒಳ್ಳೆಯದು ಮನೆಯಲ್ಲಿಯೇ ಹಣ್ಣುಗಳ ರಸವನ್ನು ತೆಗೆದು ಮಕ್ಕಳಿಗೆ ಕುಡಿಯಲು ನೀಡುವುದರಿಂದ ಮಕ್ಕಳು ದಿನವಿಡಿ ಶಕ್ತಿದಾಯಕವಾಗಿ ಹಾಗೂ ಆರೋಗ್ಯದಿಂದ ಕೂಡಿರುತ್ತಾರೆ. 

5) ಬಾದಾಮಿ ಹಾಲು

ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಒಂದು ಲೋಟ ಬೆಚ್ಚಗಿನ ಬಾದಾಮಿ ಹಾಲನ್ನು ಕಾಯಿಸಿ ಕೊಟ್ಟರೆ ಮಗು ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತದೆ ಹಾಗೂ ಏಕಾಗ್ರತೆ, ಗ್ರಹಿಸುವ ಶಕ್ತಿ, ನೆನಪಿನ ಶಕ್ತಿ ಎಲ್ಲವೂ ಚೆನ್ನಾಗಿರುತ್ತೆ.

ಸೂಚನೆಗಳು:

✒ಮಗುವಿಗೆ ಕುಡಿಯಲು ಚೆನ್ನಾಗಿ ನೀರು ಕೊಡಿ.
✒ಅಡುಗೆಯಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ✒ಬಳಸಬೇಕು.
✒ಬಣ್ಣ ಬಣ್ಣದ ತರಕಾರಿಗಳಿಂದ ಕೂಡಿದ ಊಟವನ್ನು ಮಕ್ಕಳಿಗೆ ನೀಡಬೇಕು.
✒ಸಾಕಷ್ಟು ಪೌಷ್ಟಿಕ ಆಹಾರಗಳಿಂದ ಕೂಡಿರಬೇಕು ಅಡುಗೆ ಎಣ್ಣೆ ಕಡಿಮೆ ಬಳಸಬೇಕು.
✒ಪ್ರತಿ ಬ್ರೇಕ್‌ಫಾಸ್ಟ್ 20–30 ನಿಮಿಷಗಳಲ್ಲಿ ಕೊನೆಗೊಳಿಸಬೇಕು.  

ನಾನು ಈಗಾಗಲೇ ಮಕ್ಕಳಿಗಾಗಿ ಆಯುರ್ವೇದ ಎಂದು ಇನ್ನೊಂದು ಲೇಖನವನ್ನು ಬರೆದಿದ್ದೇನೆ ಓದಿ. ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ

https://www.aarogyawithanitha.com/2026/02/blog-post.html



Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery