ಹಳದಿ ಗಟ್ಟಿದ ಹಲ್ಲು: ಕಾರಣಗಳು, ಪರಿಹಾರಗಳು ಮತ್ತು ಮನೆಮದ್ದುಗಳು
ಹಲ್ಲು ಹಳದಿ ಆಗುವುದಕ್ಕೆ ಕಾರಣ ಏನು? ತಿಳಿದುಕೊಳ್ಳಿ!
ಹಲ್ಲುಗಳು ಹಳದಿಯಾಗುವ ಪ್ರಮುಖ ಕಾರಣಗಳು?
ಹಲ್ಲುಗಳು ಹಳದಿಯಾಗಲು ಹಲವಾರು ಕಾರಣಗಳಿವೆ. ಕಾಫಿ, ಟೀ, ಕೋಲ್ಡ್ ಡ್ರಿಂಕ್ಸ್ ಹೆಚ್ಚು ಸೇವಿಸುವುದು ಹಲ್ಲಿನ ಮೇಲೆ ಮಚ್ಚೆಗಳನ್ನು ಉಂಟುಮಾಡುತ್ತದೆ. ಸರಿಯಾಗಿ ಬ್ರಷ್ ಮಾಡದಿರುವುದು ಅಥವಾ ದಿನಕ್ಕೆ ಎರಡು ಬಾರಿ ದಂತ ಸ್ವಚ್ಛತೆ ಪಾಲಿಸದಿರುವುದು ಕೂಡ ಪ್ರಮುಖ ಕಾರಣ. ಕೆಲವೊಮ್ಮೆ ವಯಸ್ಸು ಹೆಚ್ಚಾದಂತೆ ಹಲ್ಲಿನ ಮೇಲಿನ ಪದರ (ಎನಾಮೆಲ್) ಕಡಿಮೆಯಾಗುವುದರಿಂದ ಹಳದಿ ಬಣ್ಣ ಕಾಣಿಸಬಹುದು.
ಇದನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ?
ಹಳದಿ ಹಲ್ಲುಗಳನ್ನು ನಿರ್ಲಕ್ಷಿಸಿದರೆ ಪ್ಲಾಕ್ (plaque) ಮತ್ತು ಟಾರ್ಟರ್ (tartar) ಹೆಚ್ಚಾಗಿ, ದಂತ ಸಮಸ್ಯೆಗಳು ಉಂಟಾಗಬಹುದು. ಹಲ್ಲು ದುರ್ಬಲವಾಗುವುದು, ದುರ್ವಾಸನೆ (bad breath) ಮತ್ತು ದಂತ ನೋವು ಕೂಡ ಕಾಣಿಸಬಹುದು. ಆದ್ದರಿಂದ ಮೊದಲ ಹಂತದಲ್ಲೇ ಕಾಳಜಿ ತೆಗೆದುಕೊಳ್ಳುವುದು ಮುಖ್ಯ.
ನೈಸರ್ಗಿಕ ಮನೆಮದ್ದುಗಳು
ಹಲ್ಲುಗಳನ್ನು ಸ್ವಚ್ಛವಾಗಿಡಲು ಕೆಲವು ಸರಳ ಮನೆಮದ್ದುಗಳು ಸಹಾಯ ಮಾಡುತ್ತವೆ:
1.ಬೇಕಿಂಗ್ ಸೋಡಾ + ಲಿಂಬೆ
ಸ್ವಲ್ಪ ಬೇಕಿಂಗ್ ಸೋಡಾ ಜೊತೆ ಲಿಂಬೆ ರಸ ಸೇರಿಸಿ ವಾರಕ್ಕೆ 1 ಬಾರಿ ಬಳಸಿದರೆ ಹಲ್ಲಿನ ಮಚ್ಚೆಗಳು ಕಡಿಮೆಯಾಗಬಹುದು.
2.ಬೇವಿನ ಕಡ್ಡಿ ಬಳಕೆ
ಪ್ರಾಚೀನ ವಿಧಾನವಾದ ಬೆವು ಕಡ್ಡಿಯಿಂದ ಹಲ್ಲು ತೊಳೆಯುವುದರಿಂದ ಸ್ವಚ್ಛತೆ ಹೆಚ್ಚುತ್ತದೆ.
3.ಉಪ್ಪು + ಅರಿಶಿನ mix
ಉಪ್ಪು ಮತ್ತು ಅರಿಶಿನ mix ಮಾಡಿ ಹಲ್ಲಿಗೆ ನಿಧಾನವಾಗಿ ತೊಳೆದರೆ ಬ್ಯಾಕ್ಟೀರಿಯಾ ಕಡಿಮೆಯಾಗುತ್ತದೆ ಮತ್ತು ಹಲ್ಲು ಸ್ವಚ್ಛವಾಗಿರುತ್ತದೆ. ಇದನ್ನು ವಾರಕ್ಕೆ 1–2 ಬಾರಿ ಮಾತ್ರ ಬಳಸಿ, ಹೆಚ್ಚು ಒತ್ತಡ ಹಾಕಬೇಡಿ ಏಕೆಂದರೆ enamel ಗೆ ಹಾನಿಯಾಗಬಹುದು.
ನನ್ನ ಹಿಂದಿನ ಲೇಖನದಲ್ಲಿ ನೆಲ್ಲಿಕಾಯಿಯ ಉಪಯೋಗಗಳನ್ನು ತಿಳಿಸಿದ್ದೇನೆ. ಅದನ್ನು ಸಹ ಓದಿ👇https://www.aarogyawithanitha.com/2026/04/amla-benefits-kannada.html
ದಿನನಿತ್ಯದ ಕಾಳಜಿ
ಹಲ್ಲುಗಳನ್ನು ಆರೋಗ್ಯಕರವಾಗಿಡಲು ದಿನನಿತ್ಯದ ಅಭ್ಯಾಸಗಳು ಬಹಳ ಮುಖ್ಯ:
• ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ
• ಫ್ಲಾಸ್ ಬಳಸಿ
• ಹೆಚ್ಚು ಸಿಹಿ ಮತ್ತು ಗಟ್ಟಿಯಾದ ಪಾನೀಯಗಳನ್ನು ಕಡಿಮೆ ಮಾಡಿ
• ನೀರು ಹೆಚ್ಚು ಕುಡಿಯಿರಿ
ಯಾವಾಗ ಡಾಕ್ಟರ್ ಬಳಿ ಹೋಗಬೇಕು?
ಹಳದಿ ಹಲ್ಲುಗಳು ಹೆಚ್ಚು ಗಟ್ಟಿಯಾಗಿದ್ದರೆ ಅಥವಾ ಮನೆಮದ್ದುಗಳಿಂದ ಕಡಿಮೆಯಾಗದಿದ್ದರೆ ದಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅವರು professional cleaning ಮೂಲಕ ಉತ್ತಮ ಫಲಿತಾಂಶ ಕೊಡುತ್ತಾರೆ.
ಸರಳ ಸಲಹೆ
ಸ್ಟ್ರಾ ಬಳಸಿ ಜ್ಯೂಸ್ ಅಥವಾ ಕೋಲ್ಡ್ ಡ್ರಿಂಕ್ಸ್ ಕುಡಿಯೋದರಿಂದ ಹಲ್ಲುಗಳಿಗೆ direct contact ಕಡಿಮೆ ಆಗುತ್ತದೆ.
ಕೊನೆಯದಾಗಿ
ಹಳದಿ ಗಟ್ಟಿದ ಹಲ್ಲು ಸಮಸ್ಯೆ ಸರಿಯಾದ ಕಾಳಜಿ ಮತ್ತು ಸ್ವಚ್ಛತೆ ಮೂಲಕ ಸುಲಭವಾಗಿ ನಿಯಂತ್ರಿಸಬಹುದು. ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರ ಜೊತೆಗೆ, ದಿನನಿತ್ಯದ hygiene maintain ಮಾಡಿದರೆ ನಿಮ್ಮ ನಗು ಇನ್ನಷ್ಟು ಸುಂದರವಾಗುತ್ತದೆ.

Comments
Post a Comment