ಮಕ್ಕಳಲ್ಲಿ ಅತಿಯಾದ ಭೇದಿ ಮನೆಮದ್ದು ಪರಿಹಾರ | Baby loose motions Remedies Kannada
ಮಕ್ಕಳಲ್ಲಿ ಅತಿಯಾದ ಭೇದಿ ಮನೆಮದ್ದು ಪರಿಹಾರ
ಮಕ್ಕಳಲ್ಲಿ ಭೇದಿ (diarrhea) ಆಗೋದು ಸಾಮಾನ್ಯ ಸಮಸ್ಯೆ. ಆದರೆ ಅತಿಯಾದರೆ ದೇಹದಲ್ಲಿ ನೀರಿನ ಕೊರತೆ (dehydration) ಆಗಿ ದುರ್ಬಲತೆ ಬರುತ್ತದೆ.
ಅದಕ್ಕೆ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಕೆಲವು ನೈಸರ್ಗಿಕ ಮನೆಮದ್ದುಗಳು ಇಲ್ಲಿವೆ.
ಮಕ್ಕಳಲ್ಲಿ ಭೇದಿ ಏಕೆ ಬರುತ್ತದೆ?
ಮಕ್ಕಳಲ್ಲಿ ಭೇದಿ ಸಾಮಾನ್ಯವಾಗಿ ಸೋಂಕು (ವೈರಸ್/ಬ್ಯಾಕ್ಟೀರಿಯಾ), ಅಶುದ್ಧ ಆಹಾರ ಅಥವಾ ನೀರು, ಕೈಗಳ ಸ್ವಚ್ಛತೆ ಕೊರತೆ, ಹೊಸ ಆಹಾರಕ್ಕೆ ದೇಹ ಹೊಂದಿಕೊಳ್ಳದಿರುವುದು, ಅಥವಾ ಹಾಲು ಜೀರ್ಣವಾಗದ ಸಮಸ್ಯೆಯಿಂದ ಬರುತ್ತದೆ. ಕೆಲವೊಮ್ಮೆ ಹಲ್ಲು ಬರುತ್ತಿರುವ ಸಮಯದಲ್ಲೂ ಕಾಣಿಸಬಹುದು, ಆದರೆ ಸ್ವಚ್ಛತೆ ಮುಖ್ಯ ಕಾರಣವಾಗಿರುತ್ತದೆ.
ಮನೆಮದ್ದುಗಳು
1.ಮೊಸರು + ಅನ್ನ
ತಣ್ಣಗಿನ ಮೊಸರು ಜೊತೆ ಸ್ವಲ್ಪ ಮೃದುವಾದ ಅನ್ನ ಕೊಟ್ಟರೆ ಹೊಟ್ಟೆ ಶಾಂತವಾಗುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.
2.ಜೀರಿಗೆ ನೀರು
ಜೀರಿಗೆ ಕುದಿಸಿ ತಣ್ಣಗಾದ ಮೇಲೆ ಕೊಟ್ಟರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ ಮತ್ತು ಭೇದಿ ನಿಯಂತ್ರಣಕ್ಕೆ ಬರುತ್ತದೆ.
3.ಬಾಳೆಹಣ್ಣು
ಪಕ್ವವಾದ ಬಾಳೆಹಣ್ಣು ಮಕ್ಕಳಿಗೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಶಕ್ತಿ ಕೊಡುತ್ತದೆ ಮತ್ತು ಮಲವನ್ನು ಗಟ್ಟಿಯಾಗಿಸುತ್ತದೆ.
4. ಅಕ್ಕಿ ಗಂಜಿ (Rice ganji)
ಇದು ದೇಹಕ್ಕೆ ನೀರಿನ ಕೊರತೆ ತಪ್ಪಿಸುತ್ತದೆ ಮತ್ತು ಹೊಟ್ಟೆ ಸೌಮ್ಯವಾಗಿರಲು ಸಹಾಯ ಮಾಡುತ್ತದೆ.
5. ORS ದ್ರಾವಣ
ORS (Oral Rehydration Solution) ದೇಹದ ನೀರಿನ ಸಮತೋಲನ ಕಾಪಾಡುತ್ತದೆ. ಇದು ತುಂಬಾ ಮುಖ್ಯ!
ನನ್ನ ಮತ್ತೊಂದು ಲೇಖನದಲ್ಲಿ ಕಣ್ಣಿನ ಸುತ್ತ ಕಪ್ಪು ಕಲೆಗಳಿಗೆ ಪರಿಹಾರವನ್ನು ತಿಳಿಸಲಾಗಿದೆ. ಅದನ್ನು ಸಹ ಓದಿ.👇 ಉಪಯೋಗ ಪಡೆದುಕೊಳ್ಳಿ.
https://www.aarogyawithanitha.com/2026/04/dark-circles-7-days-kannada.html
⚠️ ಗಮನಿಸಬೇಕಾದ ವಿಷಯಗಳು
☑ಮಕ್ಕಳಿಗೆ ಹೆಚ್ಚು ಹೆಚ್ಚು ನೀರು ಕೊಡಿ
☑ಮಸಾಲೆ, ಎಣ್ಣೆ ಪದಾರ್ಥಗಳನ್ನು ತಪ್ಪಿಸಿ
☑ಕೈಗಳನ್ನು ಸ್ವಚ್ಛವಾಗಿ ತೊಳೆಯುವ ಅಭ್ಯಾಸ ಮಾಡಿಸಿ
☑ಭೇದಿ 2 ದಿನಕ್ಕಿಂತ ಹೆಚ್ಚು ಮುಂದುವರಿದರೆ ಡಾಕ್ಟರ್ ಸಂಪರ್ಕಿಸಿ.
ಕೊನೆಯ ಮಾತು
ಮಕ್ಕಳ ಆರೋಗ್ಯ ನಮ್ಮ ಕೈಯಲ್ಲಿ ಇದೆ. ಸಣ್ಣ ಸಮಸ್ಯೆ ಅನಿಸೋದ್ರೂ ಗಮನ ಕೊಡೋದರಿಂದ ದೊಡ್ಡ ಸಮಸ್ಯೆ ತಪ್ಪಿಸಬಹುದು.
ಪ್ರೀತಿಯಿಂದ ಕಾಳಜಿ ವಹಿಸಿ, ನಿಮ್ಮ ಮಗು ಆರೋಗ್ಯವಾಗಿರಲಿ.
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ♥️ ನನ್ನ ವೆಬ್ಸೈಟ್ ಅನ್ನು ಫಾಲೋ ಮಾಡಿ. ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.🫰
Comments
Post a Comment