ಮಕ್ಕಳಿಗೆ ಕೆಮ್ಮು ವಿಪರೀತವೇ? ಇಲ್ಲಿದೆ ನೋಡಿ ಪರಿಹಾರ👇

ಮಕ್ಕಳಿಗೆ ಕೆಮ್ಮು ಯಾಕೆ ಬರುತ್ತದೆ?

ಮಕ್ಕಳಲ್ಲಿ ಕೆಮ್ಮು ಸಾಮಾನ್ಯವಾಗಿ ವೈರಲ್ ಸೋಂಕು, ಧೂಳು, ಚಳಿ ಹವಾಮಾನ ಮತ್ತು ಕಡಿಮೆ ರೋಗನಿರೋಧಕ ಶಕ್ತಿಯಿಂದ ಬರುತ್ತದೆ. ಕೆಲವೊಮ್ಮೆ ತಣ್ಣನೆಯ ಆಹಾರ ಮತ್ತು ಐಸ್ ಕ್ರೀಮ್ ಹೆಚ್ಚು ತಿಂದರೂ ಗಂಟಲು ಸಮಸ್ಯೆ ಕಾಣಿಸಬಹುದು. ಕೆಮ್ಮು ದೇಹದ ರಕ್ಷಣಾತ್ಮಕ ಕ್ರಿಯೆಯಾಗಿದ್ದು, ಕಫ ಮತ್ತು ಧೂಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆದರೆ ಹೆಚ್ಚು ದಿನ ಕೆಮ್ಮು ಇದ್ದರೆ ವೈದ್ಯರ ಸಲಹೆ ಅಗತ್ಯ. ವೈದ್ಯರನ್ನು ಕಾಣುವ ಮೊದಲು ಒಮ್ಮೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ನನ್ನ ಮಕ್ಕಳಿಗೆ ಇದು ಉಪಯುಕ್ತವಾಗಿದೆ. 

ಬಿಸಿನೀರು ಸಹಾಯ ಮಾಡುತ್ತದೆ

ಬೆಚ್ಚಗಿನ ನೀರು ಗಂಟಲಿನ ಉರಿಯೂತ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಗಂಟಲಿನಲ್ಲಿ ಜಮಾ ಆಗಿರುವ ಕಫವನ್ನು ಸಡಿಲಗೊಳಿಸಿ ಉಸಿರಾಟ ಸುಲಭವಾಗಲು ಸಹಕಾರಿಯಾಗುತ್ತದೆ. ಮಕ್ಕಳಿಗೆ ಸ್ವಲ್ಪ ಸ್ವಲ್ಪವಾಗಿ ಬಿಸಿನೀರು ನೀಡಿದರೆ ಗಂಟಲು ಆರಾಮವಾಗಬಹುದು. Doctors ಕೂಡ ಬೆಚ್ಚಗಿನ ದ್ರವ ಪದಾರ್ಥಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.

ಜೇನುತುಪ್ಪ ಮತ್ತು ತುಳಸಿ ಪ್ರಯೋಜನಗಳು

ಜೇನುತುಪ್ಪ ಗಂಟಲು ಆರಾಮವಾಗಲು ಮತ್ತು ರಾತ್ರಿ ಕೆಮ್ಮು ಕಡಿಮೆಯಾಗಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳಲ್ಲಿ ಔಷಧೀಯ ಗುಣಗಳಿದ್ದು ಶೀತ ಮತ್ತು ಕೆಮ್ಮಿನ ಸಮಯದಲ್ಲಿ ದೇಹಕ್ಕೆ ಉಪಯುಕ್ತವಾಗಿರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಜೇನುತುಪ್ಪದಲ್ಲಿ antibacterial ಗುಣಗಳಿವೆ. ತುಳಸಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಹಾಗೂ ತುಳಸಿಯ ರಸವನ್ನು ಸಿದ್ಧಪಡಿಸಿ ಒಂದು ಸ್ಪೂನ್ ಜೇನುತುಪ್ಪದೊಂದಿಗೆ ಮಗುವಿಗೆ ನೀಡಿದರೆ ಆರಾಮ ಎನಿಸುತ್ತದೆ. 

ಶುಂಠಿ ರಸ ಉತ್ತಮ

ಶುಂಠಿಯಲ್ಲಿ anti-inflammatory ಮತ್ತು antibacterial ಗುಣಗಳಿವೆ. ಇದು ಗಂಟಲು ನೋವು ಮತ್ತು ಕಫ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಶುಂಠಿ ಸೇರಿಸಿ ನೀಡಿದರೆ ಮಕ್ಕಳಿಗೆ ಗಂಟಲು ಆರಾಮವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ ಶುಂಠಿ ದೇಹದ ಸೋಂಕುಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಕೆಮ್ಮು ಸಮಯದಲ್ಲಿ ಮನೆಯಲ್ಲೇ ಬಳಸುವ ಸಾಮಾನ್ಯ ಮನೆಮದ್ದುಗಳಲ್ಲಿ ಶುಂಠಿಯೂ ಒಂದು.

ಮಗುವಿಗೆ ಸ್ಟೀಮ್ ಸಹಾಯ ಮಾಡುತ್ತದೆ.

Steam ತೆಗೆಸುವುದರಿಂದ ಮೂಗು ಮತ್ತು ಗಂಟಲಿನಲ್ಲಿ ಜಮಾ ಆಗಿರುವ ಕಫ ಸಡಿಲಗೊಳ್ಳುತ್ತದೆ. ಇದರಿಂದ ಮಕ್ಕಳಿಗೆ ಉಸಿರಾಟ ಸ್ವಲ್ಪ ಸುಲಭವಾಗಬಹುದು. ವಿಶೇಷವಾಗಿ ರಾತ್ರಿ ಸಮಯದಲ್ಲಿ steam ತೆಗೆಸಿದರೆ ಕೆಮ್ಮು ಕಡಿಮೆಯಾಗಲು ಸಹಾಯ ಮಾಡಬಹುದು. ಬೆಚ್ಚಗಿನ ಆವಿಯಿಂದ ಮೂಗಿನ ಬ್ಲಾಕ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದರೆ ತುಂಬಾ ಬಿಸಿ steam ಮಕ್ಕಳಿಗೆ ಅಪಾಯಕಾರಿಯಾಗಬಹುದು, ಆದ್ದರಿಂದ parents ಜಾಗ್ರತೆಯಿಂದ steam ಕೊಡಿಸಬೇಕು.

ಅನುಭವದ ಮಾತು 

ಮಕ್ಕಳಿಗೆ ಕೆಮ್ಮು ಹೆಚ್ಚಾದಾಗ ತಾಯಂದಿರು ಆತಂಕಪಡುವುದು ಸಹಜ. ಆದರೆ ಸರಿಯಾದ ಆರೈಕೆ, ಬೆಚ್ಚಗಿನ ಆಹಾರ ಮತ್ತು ಅಮ್ಮನ ಸಾಂತ್ವಾನ ಮಕ್ಕಳಿಗೆ ಬೇಗ ಆರಾಮ ಕೊಡಲು ಸಹಾಯ ಮಾಡುತ್ತದೆ. ಬಿಸಿ ಬಿಸಿ ರಸಂ ಅನ್ನ, ಮನೆಯಲ್ಲೇ ಮಾಡಿದ ಆರೋಗ್ಯಕರ ಆಹಾರ ಮತ್ತು ಸಾಕಷ್ಟು ವಿಶ್ರಾಂತಿ ಮಕ್ಕಳ ದೇಹಕ್ಕೆ ಶಕ್ತಿ ನೀಡುತ್ತವೆ.ಮಗುವಿನ ಆರೋಗ್ಯದಲ್ಲಿ ಏನಾದರೂ ಗಂಭೀರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ. 

ಸಾಮಾನ್ಯ ಪ್ರಶ್ನೆಗಳು- FAQ 

1.ಕೆಮ್ಮು ಇದ್ದಾಗ ಯಾವ ಆಹಾರ ಉತ್ತಮ?

ಹಣ್ಣು, ಸೂಪ್, ಮನೆಯ ಪೌಷ್ಟಿಕ ಆಹಾರ ಮತ್ತು ಬೆಚ್ಚಗಿನ ದ್ರವ ಪದಾರ್ಥಗಳು ಉತ್ತಮ.

2.ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

ಉಸಿರಾಟ ತೊಂದರೆ, ಹೆಚ್ಚು ಜ್ವರ ಅಥವಾ ದೀರ್ಘಕಾಲ ಕೆಮ್ಮು ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

3.ಜೇನುತುಪ್ಪ ಯಾವ ವಯಸ್ಸಿನ ಮಕ್ಕಳಿಗೆ ಕೊಡಬಹುದು?

ಒಂದು ವರ್ಷದ ಮೇಲಿನ ಮಕ್ಕಳಿಗೆ ಮಾತ್ರ ಕೊಡಬೇಕು.

ನನ್ನ ಮತ್ತೊಂದು ಲೇಖನದಲ್ಲಿ "ಮಗುವಿನ ಚರ್ಮದ ಸಮಸ್ಯೆಗೆ ಕಾರಣ ಮತ್ತು ಪರಿಹಾರಗಳನ್ನು"  ತಿಳಿಸಲಾಗಿದೆ.ಅದನ್ನು ಸಹ ಓದಿ. 👇

https://www.aarogyawithanitha.com/2026/05/maguvina-charmada-samasymanemaddu.html

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನನ್ನ ವೆಬ್ಸೈಟ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ  ಸ್ನೇಹಿತರೊಡನೆ  ಹಂಚಿಕೊಳ್ಳಿ.


Comments

Popular posts from this blog

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ತೂಕ ಇಳಿಕೆಯ ಆರೋಗ್ಯಕರ ಪಾನೀಯಗಳು – ಮನೆಯಲ್ಲೇ ಮಾಡುವ ಸರಳ ಡ್ರಿಂಕ್ಸ್.👇👇