"ಅಜ್ಜಿ ತಲೆ ಎಣ್ಣೆ ಮಸಾಜ್ ಮಾಡುವ ಸಂಪ್ರದಾಯ"

ಬಾಣಂತಿಯರಿಗೆ ಅಜ್ಜಿ ಮಾಡುತ್ತಿದ್ದ ತಲೆ ಎಣ್ಣೆ ಮಸಾಜ್.

ಅಜ್ಜಿ ಮನೆ ಮದ್ದು ವಿಧಾನದಲ್ಲಿ ತಲೆ ಎಣ್ಣೆ ಮಸಾಜ್ ಮಾಡುತ್ತಿರುವ ಮಹಿಳೆ
ನಮ್ಮ ಹಿಂದಿನ ಕಾಲದಲ್ಲಿ ಅಜ್ಜಿ ಮನೇಮದ್ದು ವಿಧಾನಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಅದರಲ್ಲೂ ತಲೆ ಎಣ್ಣೆ ಮಸಾಜ್ ಎಂಬುದು ಬಹಳ ಪ್ರಮುಖವಾದ ವಿಧಾನವಾಗಿದೆ. ವಿಶೇಷವಾಗಿ ಬಾಣಂತಿಯರಿಗೆ ಮತ್ತು ಮಹಿಳೆಯರಿಗೆ ತಲೆ ಎಣ್ಣೆ ಮಸಾಜ್ ಮಾಡುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಹಾಗೂ ಮನಸ್ಸಿಗೆ ಶಾಂತಿ ದೊರೆಯುತ್ತದೆ.

ಅಜ್ಜಿ ಮನೆಯಲ್ಲೇ ತಯಾರಿಸಿದ ತೆಂಗಿನ ಎಣ್ಣೆ, ಎಳ್ಳೆಣ್ಣೆ ಅಥವಾ ಆಯುರ್ವೇದ ಔಷಧಿಗಳನ್ನು ಬಳಸಿ ಮೃದುವಾಗಿ ತಲೆಗೆ ಮಸಾಜ್ ಮಾಡುತ್ತಿದ್ದರು. ಇದರಿಂದ ತಲೆನೋವು ಕಡಿಮೆಯಾಗುವುದು, ಕೂದಲು ಬಲವಾಗುವುದು ಹಾಗೂ ನಿದ್ರೆ ಚೆನ್ನಾಗಾಗುವುದು ಎಂದು ಹಿರಿಯರು ಹೇಳುತ್ತಾರೆ.

ಈ ರೀತಿಯ ಸಂಪ್ರದಾಯಿಕ ಮನೇಮದ್ದು ವಿಧಾನಗಳು ನಮ್ಮ ಸಂಸ್ಕೃತಿಯ ಭಾಗವಾಗಿವೆ. ಇಂದಿನ ದಿನಗಳಲ್ಲಿ ಕೂಡ ಸಮಯ ಮಾಡಿಕೊಂಡು ವಾರಕ್ಕೆ 2–3 ಬಾರಿ ತಲೆ ಎಣ್ಣೆ ಮಸಾಜ್ ಮಾಡಿದರೆ ದೇಹ-ಮನಸ್ಸು ಆರೋಗ್ಯವಾಗಿರಲು ಸಹಾಯಕ.

ನನ್ನ ಅನುಭವ ಹೇಳುವುದಾದರೆ ನನ್ನ ಅಮ್ಮ ತಿಂಗಳಿಗೆ ಒಮ್ಮೆ ಬೆನ್ನು, ಕೈಕಾಲುಗಳಿಗೆ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡುತ್ತಿದ್ದರು, ಇದರಿಂದ ನಾನು ತಿಂಗಳಿಗೊಮ್ಮೆ ಋತುಸ್ರಾವಕೊಳಗಾದಾಗ ಯಾವುದೇ ನೋವನ್ನು ಅನುಭವಿಸುವುದಿಲ್ಲ.
ಉದಾಹರಣೆಗೆ :ಹೊಟ್ಟೆ ನೋವು ,ಸೊಂಟ ನೋವು ಇತ್ಯಾದಿ.

ಮಸಾಜ್ ಆದ ನಂತರ ಚೆನ್ನಾಗಿ ಬಾಣಂತಿಯ ತಲೆಯನ್ನು ಒಣಗಿಸುವುದು ಬಹು ಮುಖ್ಯ ಪಾತ್ರ ವಹಿಸುತ್ತದೆ. ಸ್ನಾನವಾದ ನಂತರ ತಲೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ,ತಲೆಗೆ ಸಾಮ್ರಾಣಿ ಹೊಗೆಯನ್ನು ನೀಡಬೇಕು. ಇದರಿಂದ ಶೀತವಾಗುವುದನ್ನು ತಡೆಗಟ್ಟಬಹುದು .ಇವು ತಲೆಗೆ ಬಲ ನೀಡಲು ಸಹಾಯ ಮಾಡುತ್ತವೆ.

ಅಜ್ಜಿ ಮನೆ ಮದ್ದು ಸಾಂಪ್ರದಾಯಿಕ ಶೈಲಿ


ಕೊನೆ ಮಾತು

ನಮ್ಮ ಅಜ್ಜಿ-ಅಜ್ಜಿಯರಿಂದ ಬಂದ ಮನೆಮದ್ದುಗಳಲ್ಲಿ ಅನುಭವ ಮತ್ತು ಪ್ರೀತಿ ಅಡಗಿದೆ. ಇಂತಹ ಪಾರಂಪರಿಕ ಜ್ಞಾನವನ್ನು ಮರೆತಿಬಿಡದೆ, ವಿಜ್ಞಾನಬದ್ಧವಾಗಿ ಬಳಸುವುದು ನಮ್ಮ ಕರ್ತವ್ಯ.

ಜಾಗ್ರತೆ

ಇವು ಪಾರಂಪರಿಕ ವಿಧಾನಗಳು. ಎಲ್ಲರಿಗೂ ಒಂದೇ ರೀತಿಯಲ್ಲಿ ಹೊಂದಿಕೊಳ್ಳದೇ ಇರಬಹುದು. ಹೆರಿಗೆ ನಂತರ ಯಾವುದೇ ಹೊಸ ವಿಧಾನ ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.

ಗಮನಿಸಿ: ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery