ಮಕ್ಕಳಿಗೆ ಮನೆ ಮದ್ದು

“ಕೆಮ್ಮು ಕಾಡ್ತಿದ್ರೆ? ಮನೆಲ್ಲೇ ಇರುವ ಸರಳ ಪರಿಹಾರ ನೋಡಿ 🍯

ಮಕ್ಕಳ ಆರೋಗ್ಯ ನಮ್ಮ ಕೈಯಲ್ಲಿ ”


      

ಆರೋಗ್ಯ ಕಾಪಾಡೋದು ಕೂಡ ದುಬಾರಿ ಆಗ್ಬೇಕು ಅಂತಿಲ್ಲ.

ಸರಳ ಮನೆ ಮದ್ದು + ಸರಿಯಾದ ಜಾಗ್ರತೆ = ಮಕ್ಕಳಿಗೆ ಆರಾಮ .

ಮಕ್ಕಳಿಗೆ ಚಳಿ, ಕೆಮ್ಮು ಆಗೋದು ಸಾಮಾನ್ಯ. ತಕ್ಷಣ ಡಾಕ್ಟರ್ ಹತ್ತಿರ ಓಡೋದು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಮನೆಲ್ಲೇ ಇರುವ ಸರಳ ಪದಾರ್ಥಗಳಿಂದ ಸ್ವಲ್ಪ ಆರಾಮ ಸಿಗಬಹುದು. ಆದರೆ ಮಕ್ಕಳ ಆರೋಗ್ಯ ಮುಖ್ಯ – ತುಂಬಾ ಜಾಸ್ತಿ ಕೆಮ್ಮು ಇದ್ದರೆ ಅಥವಾ ಜ್ವರ ಇದ್ದರೆ ಡಾಕ್ಟರ್ ಸಲಹೆ ಕಡ್ಡಾಯ.

ಬೇಕಾಗಿರುವುದು??

*ಕಸ್ತೂರಿ ಮಾತ್ರೆ 

*ಜೇನುತುಪ್ಪ 


“ಕಸ್ತೂರಿ ಮಾತ್ರೆ ಗ್ರಂಥಿಯ ಅಂಗಡಿಗಳಲ್ಲಿ ಅಥವಾ ಆಯುರ್ವೇದ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಸಿಗುವ ಒಂದು ವಸ್ತು.”

*ಹೇಗೆ ಕೊಡಬೇಕು:

   ಇದರಲ್ಲಿ  ಎರಡು ಬಗೆಯವ ವಿಧಾನಗಳಿವೆ !

 ಮೊದಲನೇದು:

ಬೆಳಿಗ್ಗೆ ಸಮಯದಲ್ಲಿ ಕೇವಲ ಎರಡು ಮಾತ್ರೆಯನ್ನು ಜೇನುತುಪ್ಪದಲ್ಲಿ ಪುಡಿ ಮಾಡಿ ಮಗುವಿಗೆ ಕೊಡಬಹುದು.” 

ಎರಡನೆಯದು

ತಾಯಿಯ ಎದೆ ಹಾಲನ್ನು ಒಂದು ವಳ್ಳೆಯಲ್ಲಿ ,(ತಾಯಿಯ ಎದೆಯಲನ್ನು ಸಂಗ್ರಹಿಸುವ ಒಂದು ವಸ್ತು) ಸಂಗ್ರಹಿಸಿ ಎರಡು ಕಸ್ತೂರಿ ಮಾತ್ರೆಯನ್ನು ತೆಗೆದುಕೊಂಡು ಪುಡಿ, ಮಾಡಿ ಎದೆಯಾಲಿನ ಜೊತೆ ಮಿಶ್ರಣ ಮಾಡಬೇಕು. ಎರಡು ಚೆನ್ನಾಗಿ ಮಿಶ್ರಣವಾದ ಮೇಲೆ ಮಗುವಿಗೆ ನಿಧಾನವಾಗಿ ನೀಡಬೇಕು.

ಲಾಭ:

•ಗಂಟಲು ಸ್ವಚ್ಛವಾಗಿರಲು
•ಶೀತದಿಂದ ಆಗುವ ಅಸಹಜತೆ ಕಡಿಮೆ ಮಾಡಲು 
•ಕೆಮ್ಮುನ್ನೂ ಉಪಶಮನಗೋಳಿಸಲು 

 

🙏 ಮುಖ್ಯ ಸೂಚನೆ⚠️

ಈ ಮನೆ ಮದ್ದುಗಳು ಸಣ್ಣ ಮಟ್ಟದ ಕೆಮ್ಮಿಗೆ ಮಾತ್ರ.
ಮಗುವಿಗೆ
ಜ್ವರ ಜಾಸ್ತಿ,
ಉಸಿರಾಟ ಕಷ್ಟ,
2–3 ದಿನಕ್ಕೂ ಕೆಮ್ಮು ಕಡಿಮೆಯಾಗದಿದ್ದರೆ
👉 ತಕ್ಷಣ ಡಾಕ್ಟರ್ ಸಲಹೆ ಪಡೆಯಿರಿ.
👉 “ಮನೆಯಲ್ಲೇ ಇರುವ ಸರಳ ಉಪಾಯದಿಂದ ಮಕ್ಕಳ ಕೆಮ್ಮಿಗೆ ಆರಾಮ ಸಿಗಬಹುದು.
ಗಂಭೀರ ಜ್ವರ / ಕೆಮ್ಮು ಇದ್ದರೆ ವೈದ್ಯರನ್ನು ಸಂಪರ್ಕಿಸಿ.
ಉಪಯುಕ್ತ ಅನ್ನಿಸಿದ್ರೆ share ಮಾಡಿ 🙏”

Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery