🌿 ಬಹು ಉಪಯೋಗಿ ಔಷಧಿ ಗಿಡಗಳು
ನಮ್ಮ ಮನೆಯ ಸುತ್ತಲೂ ಸಿಗುವ ಕೆಲವು ಸಸ್ಯಗಳು ನೈಸರ್ಗಿಕ ಔಷಧಿಗಳಂತೆ ಕೆಲಸ ಮಾಡುತ್ತವೆ. ಇವುಗಳನ್ನು ಮನೆಯಲ್ಲೇ ಬೆಳೆಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ದಿನನಿತ್ಯದ ಸಣ್ಣಸಣ್ಣ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದು.
ಈ ಗಿಡದ ಹೆಸರು ನಾಗದೆಲೆ ಸೊಪ್ಪು ಇದರ ಉಪಯೋಗವೇನೆಂದರೆ, ಇದು ಬಹಳಷ್ಟು ಬಾಣಂತಿಯರು ಶೀತದಿಂದ ಬಳಲುತ್ತಿರುತ್ತಾರೆ, ಅದಕ್ಕೆ ಈ ಸೊಪ್ಪಿನ ನಾಲ್ಕೈದು ಎಲೆಗಳನ್ನು ತೊಳೆದು ಅಂಗೈಯಲ್ಲಿ ಚೆನ್ನಾಗಿ ಉಜ್ಜಿ ಅದರ ರಸವನ್ನು ಕಾಲುಗಳ ಪಾದಕ್ಕೆ ಅಂಗೈಗಳಿಗೆ ತಿಕ್ಕುವುದರಿಂದ ಒಂದೇ ದಿನದಲ್ಲಿ ಶೀತವನ್ನು ಕಡಿಮೆ ಮಾಡುತ್ತದೆ.
ತುಳಸಿ ಗಿಡವನ್ನು ನಾವು ನಮ್ಮ ಮನೆ ಮುಂದೆ ಕಾಣಬಹುದು.
ಉಪಯುಕ್ತ: ಶೀತ, ಕೆಮ್ಮು, ಗಂಟಲು ನೋವು, ರೋಗನಿರೋಧಕ ಶಕ್ತಿ
ಬಳಕೆ ಹೇಗೆ: 5–7 ಎಲೆ ಕಷಾಯ/ಚಹಾ.
ದೊಡ್ಡಪತ್ರೆ:
ಎಲೆ ಕಷಾಯ ಮಾಡಿ ಕುಡಿದರೆ ಶೀತ ಕಡಿಮೆಯಾಗುತ್ತದೆ. ಯಾವುದಾದರೂ ಸಣ್ಣ ಮಟ್ಟದ ಅಲರ್ಜಿ ಸಮಸ್ಯೆ ಇದ್ದರೆ ಎರಡು ಎಲೆಗಳನ್ನು ಕಿತ್ತು ತೆಗೆದು ಅದರ ರಸವನ್ನು ಹಚ್ಚುವುದರಿಂದ ನೆವೆ ಕಡಿಮೆಯಾಗುತ್ತದೆ.👶 ಮಕ್ಕಳಿಗೆ ನೇರವಾಗಿ ರಸ ಕೊಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ ಹೆಚ್ಚು ಪ್ರಮಾಣ ಸೇವಿಸಿದ್ರೆ ವಾಂತಿ/ಜೀರ್ಣ ತೊಂದರೆ ಆಗಬಹುದು
🩺 ಅಸ್ತಮಾ/ಉಸಿರಾಟ ಸಮಸ್ಯೆ ಇರುವವರು ನಿಯಮಿತ ಬಳಕೆ ಮೊದಲು ಡಾಕ್ಟರ್‌ನ್ನು ಕೇಳಿ.
ವೀಳ್ಯದೆಲೆ:
ಇದನಂತು ದಿನನಿತ್ಯ ಮನೆಯಲ್ಲಿ ನೋಡಬಹುದಾದ ಒಂದು ವಸ್ತು. ಇದರ ಉಪಯೋಗವೆಂದರೆ ನಿಮ್ಮ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ತೊಟ್ಟುಗಳನ್ನು ಚಿಕ್ಕ ಮಕ್ಕಳಿಗೆ ನೀಡುವುದರಿಂದ ಬಾಯಿ ವಾಸನೆ ಅಜೀರ್ಣತೆ ನಿರ್ಮೂಲನೆ ಯಾಗುತ್ತದೆ. ರಕ್ತ ಪರಿಶುದ್ಧಿಗೊಳ್ಳುತ್ತದೆ.ಜೀರ್ಣಕ್ರಿಯೆಗೆ ಸಹಾಯಕ:
ಊಟದ ನಂತರ ವೀಳೆ ಎಲೆ ಸೇವಿಸಿದ್ರೆ ಅಜೀರ್ಣ, ಗ್ಯಾಸು ಕಡಿಮೆಯಾಗುತ್ತದೆ.
ಕೆಮ್ಮು, ಶೀತಕ್ಕೆ ಉಪಯುಕ್ತ:
ವೀಳೆ ಎಲೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಎದೆಯ ಮೇಲೆ ಇಟ್ಟರೆ ಕೆಮ್ಮು ಕಡಿಮೆಯಾಗಲು ಸಹಾಯ.
ಬಾಯಿ ಆರೋಗ್ಯ:
ಬ್ಯಾಕ್ಟೀರಿಯಾ ನಾಶ ಮಾಡುವ ಗುಣ ಇರುವುದರಿಂದ ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತದೆ.
ಗಾಯಗಳು ಬೇಗ ಗುಣವಾಗಲು:
ಸಣ್ಣ ಗಾಯದ ಮೇಲೆ ಸ್ವಚ್ಛ ವೀಳೆ ಎಲೆ ಇಟ್ಟರೆ ಉರಿತ ಕಡಿಮೆಯಾಗಬಹುದು.
ಆಂಟಿ-ಆಕ್ಸಿಡೆಂಟ್ ಗುಣ:
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.
ಮುಖ್ಯ ಮಾಹಿತಿ
"ಸಣ್ಣ ಮಕ್ಕಳಿಗೆ ಬಹಳಷ್ಟು ಕೆಮ್ಮು ಕಫ ಸಂಗ್ರಹಣೆಯಾಗಿರುತ್ತದೆ. ಈ ನಾಲ್ಕು ಚಿತ್ರದಲ್ಲಿರುವ ಎಲೆಗಳನ್ನು ಕೇವಲ ಎರಡು ಎಲೆಗಳಂತೆ ಸಂಗ್ರಹಿಸಿ ಅವುಗಳನ್ನು ಒಂದು ಪಾತ್ರೆಯಲ್ಲಿ ಬಿಸಿ ಮಾಡಿ ಅಂಗೈಯಲ್ಲಿ ಉಜ್ಜಿ ರಸ ತೆಗೆದು ಎದೆಯಾಲಿನ ಜೊತೆಗೆ ಮಿಶ್ರಣ ಮಾಡಿ ನೀಡುವುದರಿಂದ ಕೆಮ್ಮು ಒಂದೇ ದಿನದಲ್ಲಿ ಕಡಿಮೆಯಾಗುತ್ತದೆ"
ಮನೆಯಲ್ಲೇ ಬೆಳೆಸೋಕೆ ಸರಳ ವಿಧಾನ
ದಿನಕ್ಕೆ ಕನಿಷ್ಠ 4–5 ಗಂಟೆ ಸೂರ್ಯಬೆಳಕು
ಮಿತವಾದ ನೀರು (ಅತಿ ನೀರು ಬೇಡ)
ನೀರು ಸರಿಯಾಗಿ ಹೊರಹೋಗುವ ಮಣ್ಣು ಬಳಸಿ
ಮಡಿಕೆ ಅಥವಾ ತೋಟ ಎರಡಲ್ಲೂ ಬೆಳೆಸಬಹುದು.
ಯಾವಾಗ ಖಂಡಿತಾ ಡಾಕ್ಟರ್‌ರನ್ನು ಸಂಪರ್ಕಿಸಬೇಕು?
3–4 ದಿನ ಜ್ವರ/ಕೆಮ್ಮು ಕಡಿಮೆಯಾಗದೇ ಇದ್ದರೆ
ಉಸಿರಾಟ ತೊಂದರೆ, ಎದೆ ನೋವು, ರಕ್ತ ಕೆಮ್ಮಿನಲ್ಲಿ ಕಾಣಿಸಿದರೆ
5 ವರ್ಷದೊಳಗಿನ ಮಕ್ಕಳಿಗೆ ಮನೆಮದ್ದು ಕೊಡುವ ಮೊದಲು
ಈಗಾಗಲೇ ನಿಯಮಿತ ಔಷಧಿ ತೆಗೆದುಕೊಳ್ಳುತ್ತಿದ್ದರೆ (BP, ಶುಗರ್, ಹೃದಯ ಸಮಸ್ಯೆ)
✅ ಸೇಫ್ ಬಳಕೆಗಾಗಿ ಗೋಲ್ಡನ್ ರೂಲ್ಸ್🔇
ಮಿತವಾಗಿ ಬಳಸಿ
ಶುದ್ಧ ಎಲೆ ಮಾತ್ರ ಬಳಸಿ
ಅಲರ್ಜಿ/ಅಸಹನೆ ಕಂಡರೆ ತಕ್ಷಣ ನಿಲ್ಲಿಸಿ
ಮನೆಮದ್ದು = ಸಹಾಯ, ಡಾಕ್ಟರ್ ಚಿಕಿತ್ಸೆ = ಮುಖ್ಯ
Comments
Post a Comment